ದ.ಕ/ಉಡುಪಿ: ಕರಾವಳಿಯಲ್ಲಿ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದು ಸಮುದ್ರದಲ್ಲಿ ಭಾರೀ ಅಲೆಗಳಿಂದ ಪ್ರಕ್ಷುಬ್ಧವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಖಡಕ್ ಎಚ್ಚರಿಕೆ ನೀಡಲಾಗಿದೆ.
ಪ್ರವಾಸಿಗರು ಸಮುದ್ರ ತೀರಕ್ಕೆ ಹೋಗದಂತೆ ವಾರ್ನಿಂಗ್ ನೀಡಲಾಗಿದೆ. ಉಡುಪಿಯ ಮಲ್ಪೆ, ಬೈಂದೂರು ಮತ್ತು ಕಾಪು ಪ್ರದೇಶದಲ್ಲಿ ಕೂಡಾ ಸಮುದ್ರ ಬಿರುಸಾಗಿ ಏರುವ ನಿರೀಕ್ಷೆಯಿದೆ.
ಮೀನುಗಾರರು ತಪ್ಪಿಯೂ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಸಣ್ಣ ಹಡಗುಗಳ ಸಂಚಾರವನ್ನು ಕೂಡಾ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.


