ಉಡುಪಿ: ಮೊಬೈಲ್ ಗೆ ಬಂದ ಲಿಂಕ್ ಕ್ಲಿಕ್ ಮಾಡಿ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ಬೀರ್ಪಾಲ್ ಸಿಂಗ್ ನಾಯಕ್ ಅವರು ಹಣ ಕಳೆದುಕೊಂಡವರು.
ಇವರ ಮೊಬೈಲ್ ಗೆ ಫಾರ್ವಡೆಡ್ ಲಿಂಕ್ ಮೆಸೇಜ್ ಬಂದಿದೆ. ಅದನ್ನು ಕ್ಲಿಕ್ ಮಾಡಿದಾಗ ಇ-ಸಿಮ್ ಖರೀದಿಯಾಗಿರುವ ಬಗ್ಗೆ ಜಿಯೋ ಕಂಪೆನಿಯಿಂದ ಮೆಸೇಜ್ ಬಂದಿತ್ತು. ಬಳಿಕ ಅವರ ಮೊಬೈಲ್ ಹ್ಯಾಕ್ ಆಗಿದೆ.
ನಂತರ ಕೆನರಾ ಬ್ಯಾಂಕ್ ಗೆ ಹೋಗಿ ಖಾತೆ ಚೆಕ್ ಮಾಡಿದಾಗ ಅದರಿಂದ 351400ರೂ. ವಿವಿಧ ಖಾತೆಗಳಿಗೆ ವರ್ಗಾವಣೆಯಾಗಿದೆ. ಈ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























