ಕುಂದಾಪುರ: ಮಹಿಳೆಯೊಬ್ಬರು ತನ್ನ ಪುಟ್ಟ ಕಂದಮ್ಮನನ್ನು ಬಿಟ್ಟು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಾಪುರದ ಉಪ್ಪಿನಕುದ್ರುವಿನಲ್ಲಿ ನಡೆದಿದೆ.
ಶ್ರೀಧರ ಅವರ ಪತ್ನಿ ಪವಿತ್ರಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಇವರು ತಲ್ಲೂರು ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಇವರು ಬೆಳಿಗ್ಗೆ ತಾಯಿಯ ಜೊತೆ ಮಾತನಾಡಿದ್ದರು.
ನಂತರ ಪತಿ-ಪತ್ನಿಯ ನಡುವೆ ಆಗಾಹ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ದೂರು ದಾಖಲಿಸಲಾಗಿದೆ. ಆದರೆ ದಂಪತಿಯ ಜಗಳದಲ್ಲಿ ಎರಡೂವರೆ ವರ್ಷದ ಪುಟ್ಟ ಕೂಸು ಮಾತ್ರ ತಾಯಿಯಲ್ಲದೆ ತಬ್ಬಲಿಯಾಯ್ತು…
























