ಉಡುಪಿ : ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಟಿಪ್ಪರ್ ಚಾಲಕನ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಪ್ರಶಾಂತ್ ಕುಮಾರ್ ಎಂಬವರು ಬ್ರಹ್ಮಾವರ ಕಡೆಯಿಂದ ನಿಟ್ಟೂರು ಕಡೆಗೆ ಮರಳನ್ನು ತುಂಬಿಸಿದ್ದ ಟಿಪ್ಪರ್ನಲ್ಲಿ ಬರುತ್ತಿದ್ದರು. ವಾಹನದಲ್ಲಿ 1.5 ಯೂನಿಟ್ನಷ್ಟು ಮರಳಿತ್ತು. ಬ್ರಹ್ಮಾವರ ಅಮ್ಮುಂಜೆ ಮರಳು ಧಕ್ಕೆ ಬಳಿಯ ಸರಕಾರಿ ಜಾಗದಲ್ಲಿ ರಾಶಿ ಹಾಕಿದ್ದ ಮರಳನ್ನು ಅಕ್ರಮವಾಗಿ ಸಾಗಾಟ ಮಾಡಿದ್ದು, ಯಾವುದೇ ಪರವಾನಗಿ ಇರಲಿಲ್ಲ ಎಂದು ತಿಳಿದುಬಂದಿದೆ.

