ಉತ್ತರಕನ್ನಡ: ಕಾಮಿಡಿ ಕಿಲಾಡಿ ಶೋ ಖ್ಯಾತಿಯ ಕಲಾವಿದನೋರ್ವ ನೇಣಿಗೆ ಶರಣಾಗಿರುವ ಘಟನೆ ಯಲ್ಲಾಪುರ ತಾಲೂಕಿನ ಚಿಮ್ಮಳ್ಳಿ ಗ್ರಾಮದ ಅರಣ್ಯದಲ್ಲಿ ನಡೆದಿದೆ.
ಕಾಮಿಡಿ ಕಿಲಾಡಿ ಶೋ ನಟ ಚಂದ್ರಶೇಖರ ಸಿದ್ದಿ (31) ಜೀವ ಕಳೆದುಕೊಂಡವರು. ಮಾನಸಿಕ ಖಿನ್ನತೆಯಿಂದ ಜೀವ ಕಳೆದುಕೊಂಡಿದ್ದಾನೆ. ತಾಲೂಕಿನ ಕಟ್ಟಿಗೆ ಗ್ರಾಮಕ್ಕೆ ಪತ್ನಿಯೊಂದಿಗೆ ಕೆಲಸಕ್ಕೆ ಎಂದು ಚಂದ್ರಶೇಖರ ಸಿದ್ದಿ ಹೋಗಿದ್ದರು. ಶನಿವಾರ ಮಧ್ಯಾಹ್ನ 2 ಗಂಟೆಗೆ ತನ್ನ ಮಗನೊಂದಿಗೆ ಶಾಲೆ ಬಿಟ್ಟು ಮನೆಗೆ ಬಂದಿದ್ದರು. ಬಳಿಕ ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೋದ ಚಂದ್ರಶೇಖರ ಸಿದ್ದಿ ಮರಳಿ ಬಂದಿರಲಿಲ್ಲ.
ಹೀಗಾಗಿ ಗಾಬರಿಯಿಂದಲೇ ಹೆಂಡತಿ ಹುಡುಕಾಡಿದಾಗ ಅವರು ಮರವೊಂದಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಚಂದ್ರಶೇಖರ ಸಿದ್ದಿ ಕಳೆದ ಎರಡು ಮೂರು ತಿಂಗಳಿನಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದನು. ಕಾರವಾರದ ಕ್ರೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇನ್ನು ಚಂದ್ರಶೇಖರ ಸಿದ್ದಿ ಘಟನೆ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಅವರ ತಾಯಿ ದೂರು ದಾಖಲು ಮಾಡಿದ್ದಾರೆ.


