ಉಡುಪಿ: ಕೆನರಾ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ಮೂವತ್ತಮೂರು ವರ್ಷ ಸೇವೆ ಸಲ್ಲಿಸಿ ಉಡುಪಿ ಮಾರುತಿ ವೀಥಿಕಾ ಶಾಖೆಯಲ್ಲಿ ನಿವೃತ್ತಿ ಹೊಂದಿದ ಉಲ್ಲಾಸ್ ಡಿ ನಾಯಕ್ ಅವರಿಗೆ ಬ್ಯಾಂಕಿನ ಪರವಾಗಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಶಾಖೆಯ ಹಿರಿಯ ಪ್ರಬಂಧಕ ಸಂತೋಷ್ ಎನ್.ಜಿ ಅವರು ಫಲ ಪುಷ್ಪ ಸ್ಮರಣಿಕೆಗಳೊಂದಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭ ಉಲ್ಲಾಸ್ ಡಿ. ನಾಯಕ್ ಅವರ ಪತ್ನಿ ಶ್ರೀ ಲಕ್ಷ್ಮಿ ನಾಯಕ್, ಪ್ರಬಂಧಕ ರವಿ ರಾತೋಡ್, ಅಧಿಕಾರಿಗಳಾದ ಮನೋರಮಾ, ಸುಷ್ಮಾ ಕುಂದರ್, ಶಶಿಕಲಾ ಮತ್ತು ಇತರ ಸಿಬ್ಬಂದಿ ಉಪಸ್ಥಿತರಿದ್ದರು.


