ಉಡುಪಿ: ನೇಜಾರು ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಸಾಕ್ಷಿಗಳ ಪಾಟಿ ಸವಾಲಿಗೆ ದಿನಾಂಕ ನಿಗದಿಪಡಿಸಿ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ಆದೇಶ ಹೊರಡಿಸಿದೆ.
ಪ್ರಕರಣದ ದೂರುದಾರೆ, ಆಕೆಯ ತಾಯಿ ಮತ್ತು ಆಟೋ ರಿಕ್ಷಾ ಚಾಲಕ ಅವರ ಮುಖ್ಯ ವಿಚಾರಣೆಯನ್ನು ಜೂ.19 ಮತ್ತು 20ರಂದು ನಡೆಸಲಾಗಿತ್ತು. ಈ ಸಾಕ್ಷಿಗಳ ಪಾಟಿ ಸವಾಲು ನಡೆಸಲು ಆ.21ರಂದು ದಿನ ನಿಗದಿಪಡಿಸಿ ನ್ಯಾಯಧೀಶರಾದ ಸಮೀವುಲ್ಲಾ ಆದೇಶ ನೀಡಿದರು.
ಆರೋಪಿ ಪರ ವಕೀಲ ರಾಜು ಪೂಜಾರಿ ಅವರಿಗೆ ಪೊಲೀಸರು ಬಾಕಿ ಉಳಿದ ದೋಷಾರೋಪಣಾ ಪಟ್ಟಿಯ ದಾಖಲೆಗಳನ್ನು ಇದೇ ವೇಳೆ ಹಸ್ತಾಂತರಿಸಿದರು. ಆರೋಪಿ ಪ್ರವೀಣ್ ಅರುಣ್ ಚೌಗಲೆಯನ್ನು ವಿಡಿಯೋ ಕಾನ್ಫ್ರೆನ್ಸ್ ಮೂಲಕ ಹಾಜರುಪಡಿಸಲಾಯಿತು.


