ಕನ್ನಡ ಕೋಗಿಲೆ ಶೋ ಸ್ಪರ್ಧಿ, ಜಾನಪದ ಗಾಯಕಿ ಸವಿತಾ ಹಾಗೂ ಗಣೇಶ್ ಪ್ರಸಾದ್ ಮಗ ಗಾಂಧಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಈ ಸಾವಿನ ಕಾರಣ ಈಗ ಬೆಳಕಿಗೆ ಬಂದಿದ್ದು, ವೆಬ್ ಸಿರೀಸ್ ಇವರ ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ
7 ನೇ ಹುಡುಗ ಮನೆಯಲ್ಲಿ ರಾತ್ರಿ ಡೇಟ್ ನೋಟ್ ಬರೆದು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಬೆಡ್ ಮೇಲೆ ಪಿಯಾನೋ ಇಟ್ಟು, ಡೇತ್ ನೋಟ್ ನಲ್ಲಿ ಈ ಪತ್ರ ಓದಿ ಅಳಬೇಡಿ, ನೀವು ಈ ಪತ್ರ ಓದುವ ಸಂದರ್ಭದಲ್ಲಿ ನಾನು ಸತ್ತು ಸ್ವರ್ಗದಲ್ಲಿರುತ್ತೇನೆ. ಈ ಮನೆ ಚೆನ್ನಾಗಿರಬೇಕು ನನ್ನಿಂದ ನೀವು ನೊಂದಿದ್ದೀರಿ,ನಿಮಗೆ ತೊಂದರೆ ಕೊಟ್ಟಿದ್ದೇನೆ, ನಿಮ್ಮನ್ನು ನೋವಿಸುವ ಉದ್ದೇಶನನ್ನದಲ್ಲ 14 ವರ್ಷ ಜೀವಿಸಿದ ಸಂತೋಷ ನನಗಿದೆ ಮಿಸ್ ಯು ಎಂದು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ.
ಸವಿತಾ ಗಾಯನ ಕಾರ್ಯಕ್ರಮದ ನಿಮಿತ್ತ ಆಸ್ಟ್ರೇಲಿಯಾ ತೆರಳಿದ್ದರು. ಬೆಳಗ್ಗೆ ಎದ್ದ ಕೂಡಲೇ ತಂದೆ ಹಿರಿಯ ಮಗನಿಗೆ ನಿನ್ನ ತಮ್ಮನನ್ನು ಎಬ್ಬಿಸಿ ನಾಯಿಯನ್ನು ಕರೆದುಕೊಂಡು ವಾಕ್ ಹೋಗಲು ಹೇಳು ಎಂದಿದ್ದಾರೆ. ಆಗ ಹಿರಿಯ ಮಗ ರೂಮ್ ಒಳಗಡೆ ಹೋದಾಗ ನೇಣು ಹಾಕಿಕೊಂಡಿರುವುದು ಪತ್ತೆಯಾಗಿದೆ.
ಆತ್ಮಹತ್ಯೆಗೆ ಕಾರಣವಾದ ವೆಬ್ ಸಿರೀಸ್
ಗಾಂಧರ್ ಡೆತ್ ನೋಟ್ ಎನ್ನುವ ವೆಬ್ ಸಿರೀಸ್ ನೋಡುತ್ತಿದ್ದ, ಇದು ಜಪಾನ್ ಭಾಷೆಯ ವೆಬ್ ಸಿರೀಸ್ ಆಗಿದ್ದು, ಗಾಂಧಾರ್ ಈ ವೆಬ್ ಸಿರೀಸ್ ನಿಂದ ಪ್ರೇರಣೆಗೊಂಡಿದ್ದಾನೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ. ಆತ ತನ್ನ ಕೋಣೆಯಲ್ಲಿ ಸಿರೀಸ್ ಪಾತ್ರಗಳನ್ನು ಚಿತ್ರ ಬಿಡಿಸಿದ್ದ.
ಡೆತ್ ನೋಟ್ ಎನ್ನುವ ವೆಬ್ ಸಿರೀಸ್ ನಲ್ಲಿ ಲೈಟ್ ಯಾಗಾಮಿ ಎನ್ನುವ ಓರ್ವ ಸಾಮಾನ್ಯ ಕಾಲೇಜು ವಿದ್ಯಾರ್ಥಿಗೆ ಡೆತ್ ನೋಟ್ ಎನ್ನುವ ಪುಸ್ತಕ ಸಿಕ್ಕಿ ಈ ಪುಸ್ತಕದಲ್ಲಿ ಸಾವನ್ನು ವೈಭವೀಕರಿಸುವ ದೃಶ್ಯಗಳ ಬಗ್ಗೆ ವೆಬ್ ಸಿರೀಸ್ ನಲ್ಲಿ ಚಿತ್ರೀಕರಿಸಲಾಗಿದ್ದು, ಈ ದೃಶ್ಯಗಳೇ ಗಾಂಧರ್ ಸಾವಿಗೆ ಕಾರಣವಾಗಿರಬಹುದು ಎನ್ನಲಾಗಿದೆ.


