ಮೂಡುಬಿದಿರೆ : ಅನಾರೋಗ್ಯದಿಂದಾಗಿ ಮಾನಸಿಕವಾಗಿ ನೊಂದಿದ್ದ ಶಿರ್ತಾಡಿ ದಡ್ಡಲ್ಪಲ್ಕೆಯ ಫ್ಲೋರಿನ್ ಡಿಸೋಜ ( 58) ತನ್ನ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರ ಮೂವರು ಮಕ್ಕಳು ವಿದೇಶದಲ್ಲಿದ್ದು ಮನೆಯಲ್ಲಿ ತಂಗಿಯೊಂದಿಗೆ ವಾಸವಾಗಿದ್ದರು. ಕಳೆದ ಕೆಲ ಸಮಯಗಳಿಂದ ಇವರಿಗೆ ಕಾಯಿಲೆ ಬಾಧಿಸಿದ್ದು ಅದೇ ಚಿಂತೆಯಲ್ಲಿದ್ದರೆನ್ನಲಾಗಿದೆ.
ಇಂದು ತಂಗಿ ಶಿರ್ತಾಡಿ ಪೇಟೆಗೆ ಹೋಗಿದ್ದ ಸಂದರ್ಭದಲ್ಲಿ ತಮ್ಮ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂಡುಬಿದಿರೆ ಅಗ್ನಿಶಾಮಕ ದಳದವರು ಮೃತದೇಹವನ್ನು ಮೇಲಕ್ಕೆತ್ತಿದ್ದು ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
