ರಾತ್ರಿ ನಿದ್ರೆ ಸರಿಯಾಗಿ ಆಗದಿದ್ದರೆ ಮುಂಜಾನೆಯಿಂದ ಮಲಗುವವರೆಗೆ ಆ ದಿನ ಪೂರ್ತಿ ಏನೋ ಸರಿಯಾಗಿಲ್ಲ ಎಂದೇ ಅನಿಸುತ್ತದೆ. ಮನಸ್ಸು ಉಲ್ಲಸಿತವಾಗಿ ಇರುವುದೇ ಇಲ್ಲ.
ರಾತ್ರಿ ನಿದ್ರೆ ಸರಿಯಾಗಿ ಬರೆದ ಇರಿವುದಕ್ಕೆ ಕೆಲವೊಮ್ಮೆ ಸಮಸ್ಯೆಗಳು, ಟೆನ್ಷನ್ ಕಾರಣವಾಗಿದ್ದರೆ ಇನ್ನೂ ಕೆಲವು ಬಾರಿ ನಾವು ರಾತ್ರಿ ನಿದ್ರಿಸಲು ಹೋಗುವ ಮೊದಲು ಸೇವಿಸುವ ಆಹಾರ ಸಹ ಕಾರಣವಾಗಬಹುದು.
ರಾತ್ರಿ ಸಮಯದಲ್ಲಿ ಸೇವಿಸಿದರೆ ನಿದ್ದೆಗೆ ಭಂಗ ತರುವ ಕೆಲವೊಂದು ಆಹಾರ ವಸ್ತುಗಳಿವೆ. ಅವುಗಳ ಬಗ್ಗೆ ನೋಡೋಣ.
ಸಿಟ್ರಸ್ಆಮ್ಲಗಳು ಹೆಚ್ಚಾಗಿರುವ ಹಣ್ಣುಗಳನ್ನು ರಾತ್ರಿ ವೇಳೆ ಸೇವನೆ ಮಾಡಿದರೆ ಅವು ನಿದ್ರಾಭಂಗಕ್ಕೆ ಕಾರಣವಾಗಬಹುದು. ದ್ರಾಕ್ಷಿ, ಮೂಸಂಬಿ, ಆರೆಂಜ್, ಲೈಮ್ ಮೊದಲಾದ ವಿಟಾಮಿನ್ ಸಿ ಹೆಚ್ಚಾಗಿರುವ ವಸ್ತುಗಳನ್ನು ರಾತ್ರಿ ವೇಳೆ ಸೇವನೆ ಮಾಡುವುದು ತಪ್ಪಿಸಿ. ಇವುಗಳ ಸೇವನೆಯಿಂದ ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚುತ್ತದೆ. ಎದೆಯುರಿ, ಅಸಿಡಿಟಿ, ಗ್ಯಾಸ್ಟ್ರಿಕ್ ಮೊದಲಾದ ಸಮಸ್ಯೆಗಳು ರಾತ್ರಿ ವೇಳೆ ಉದ್ಭವವಾಗಿ ನಿದ್ರೆ ಮಾಡಲು ಕಷ್ಟವಾಗಬಹುದು.
ಎಣ್ಣೆಯಲ್ಲಿ ಕರಿದ ಮತ್ತು ಮಸಾಲೆ ತುಂಬಿದ ಆಹಾರಗಳು ಸಹ ರಾತ್ರಿ ವೇಳೆ ಸೇವಿಸಿದಲ್ಲಿ ನಿದ್ರೆಗೆ ಭಂಗ ಮಾಡುತ್ತವೆ. ಇವು ಜೀರ್ಣಾಂಗವ್ಯೂಹದ ಮೇಲೆ ದುಷ್ಪರಿಣಾಮ ಬೀರಿ ಹೊಟ್ಟೆಯುಬ್ಬರ, ಅಜೀರ್ಣ ಮೊದಲಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ರಾತ್ರಿ ಹೊತ್ತು ಮೊಸರಿನ ಸೇವನೆಯೂ ನಿದ್ರೆ ಚೆನ್ನಾಗಿ ಬರದೇ ಇರುವುದಕ್ಕೆ ಕಾರಣವಾಗುತ್ತದೆ. ಕಫ ಮತ್ತು ಪಿತ್ತದ ಸಮಸ್ಯೆ ಮೊಸರನ್ನು ರಾತ್ರಿ ಸೇವನೆ ಮಾಡುವುದರಿಂದ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಶ್ವಾಸನಾಳದಲ್ಲಿ ಲೋಳೆ ಉತ್ಪತ್ತಿಯಾಗಿ ಕಫ, ನೆಗಡಿ, ಕೆಮ್ಮು ಮೊದಲಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
.
ಟೀ – ಕಾಫಿಗಳನ್ನು ರಾತ್ರಿ ವೇಳೆ ತೆಗೆದುಕೊಳ್ಳುವ ಅಭ್ಯಾಸ ನಿದ್ರೆ ಸರಿಯಾಗದ ಹಾಗೆ ಸಮಸ್ಯೆ ಮಾಡುತ್ತವೆ. ಇದರಲ್ಲಿರುವ ಕೆಫೀನ್ ನಿದ್ರೆಯ ಹಾರ್ಮೋನ್ ಉತ್ಪತ್ತಿಯಾಗುವುದನ್ನು ಅಡ್ಡಿಪಡಿಸುತ್ತದೆ. ಜೊತೆಗೆ ಸಹಿ ಪದಾರ್ಥಗಳು, ಚಾಕೊಲೇಟ್, ಐಸ್ಕ್ರೀಂ ಮೊದಲಾದವುಗಳ ಸೇವನೆ ನಿದ್ರಾಭಂಗ ಮಾಡುವ ಜೊತೆಗೆ ರಕ್ತದೊತ್ತಡ ಹೆಚ್ಚುವುದಕ್ಕೂ ಕಾರಣವಾಗುತ್ತದೆ.

