ಉಜಿರೆ: ಉದ್ಯೋಗವಿಲ್ಲದೆ ನೋವಿನಲ್ಲಿರುವ ಯುವಕ – ಯುವತಿಯರಿಗೆ ಸ್ವ ಉದ್ಯೋಗದ ಹಾದಿ ತೋರಿಸುವ ಉಜಿರೆಯ ಸಿದ್ಧವನದಲ್ಲಿರುವ ರುಡ್ಸೆಟ್ ಸಂಸ್ಥೆ 12 ದಿನಗಳ ಅಣಬೆ ಬೇಸಾಯ ತರಬೇತಿಯನ್ನು ಆಯೋಜನೆ ಮಾಡಿದೆ.
ತರಬೇತಿಯು 4 Aug 2026 ರಿಂದ 15 Aug 2026 ವರೆಗೆ ನಡೆಯಲಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಗಳ ಸಹಯೋಗದಲ್ಲಿ ಈ ತರಬೇತಿ ಕಾರ್ಯಕ್ರಮ ನಡೆಯುತ್ತಿದೆ. ಪ್ರತಿನಿತ್ಯ 9.30 ರಿಂದ ಸಂಜೆ 5.30 ರವರೆಗೆ ತರಬೇತಿ ನಡೆಯುತ್ತದೆ.
18 ರಿಂದ 50 ವರ್ಷದ ಯುವಕ ಯುವತಿಯರಿಗೆ ಈ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮ ನಡೆಯುತ್ತಿದೆ. ತರಬೇತಿಗೆ ಆಯ್ಕೆಯಾದವರಿಗೆ ಊಟ, ವಸತಿ ವ್ಯವಸ್ಥೆ ಸಹ ಇದ್ದು, ಸ್ಥಳೀಯರಿಗೆ ಮನೆಯಿಂದಲೇ ತರಬೇತಿಗೆ ಹಾಜರಾಗಲು ಅವಕಾಶ ನೀಡಲಾಗಿದೆ.
ಉದ್ಯೋಗವಿಲ್ಲದೆ ಪರದಾಡುವ ಯುವ ಜನರಿಗೆ ರುಡ್ಸೆಟ್ ಮೂಲಕ ಹಲವಾರು ಉಪಯೋಗಕಾರಿ ತರಬೇತಿಗಳನ್ನು ನೀಡಿಕೊಂಡು ಬರಲಾಗುತ್ತಿದ್ದು, ಈ ಬಾರಿ ಅಣಬೆ ಬೇಸಾಯ ತರಬೇತಿ ನೀಡುತ್ತಿದೆ.

