ಪುತ್ತೂರು: ಸರಣಿ ಅಪಘಾತದ ಕಾರಣಕ್ಕೆ ಟ್ರಾಫಿಕ್ ಜಾಮ್ ಆದ ಘಟನೆ ಪುತ್ತೂರಿನ ಮುಕ್ರಂಪಾಡಿಯಲ್ಲಿ ನಡೆದಿದೆ.
ಅಲ್ಟೋ ಕಾರ್ ಗೆ ಹಿಂದಿನಿಂದ ಸ್ವಿಫ್ಟ್ ವಾಹನ ಗುದ್ದಿದೆ. ಸ್ವಿಫ್ಟ್ ವಾಹನಕ್ಕೆ ಹಿಂದಿನಿಂದ ಪಿಕಪ್ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸ್ವಿಫ್ಟ್ ವಾಹನ ಜಖಂ ಗೊಂಡಿದ್ದು, ಪಿಕಪ್ ಚರಂಡಿಗೆ ಇಳಿದಿದೆ. ಪರಿಣಾಮ ರಸ್ತೆಯಲ್ಲಿ ಬಹಳ ದೂರದ ವರೆಗೆ ಟ್ರಾಫಿಕ್ ಜಾಮ್ ಸಂಭವಿಸಿದೆ.

