ಮದ್ರಾಸ್: ಸೂಪರ್ಸ್ಟಾರ್ ರಜನೀಕಾಂತ್ ಅಭಿನಯದಲ್ಲಿ 2014 ರಲ್ಲಿ ತೆರೆಕಂಡಿದ್ದ ಕೊಚಾಡಿಯನ್ ಚಿತ್ರವನ್ನು ಎಐ ಟೆಕ್ನಾಲಜಿ ಬಳಸಿ ಸುಧಾರಿಸಲಾಗಿರುವ ಹೊಸ ಆವೃತ್ತಿ ಮರುಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಈ ಕಾರಣಕ್ಕೆ ರಜನೀ ಫ್ರಾನ್ಸ್ ಫುಲ್ ಖುಷ್ ಆಗಿದ್ದಾರೆ.
ಹಣಕಾಸು ವಿಚಾರಕ್ಕೆ ಸಂಬಂಧಿಸಿದ ಹಾಗೆ ಈ ಚಿತ್ರಕ್ಕೆ ನೆರವು ನೀಡಿದ ಸಂಸ್ಥೆ ಈ ಚಿತ್ರದ ಮರುಬಿಡುಗಡೆಗೆ ತಡೆ ನೀಡುವಂತೆ ಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಾಲಯ ಆ ಅರ್ಜಿಯನ್ನು ವಜಾ ಮಾಡಿ ಚಿತ್ರ ಬಿಡುಗಡೆಗೆ ಅವಕಾಶ ಒದಗಿಸಿದೆ.
ನಿರ್ಮಾಪಕರು ಒಪ್ಪಂದ ಮಾಡಿಕೊಂಡ ಹಾಗೆ ಹಣ ನೀಡಿಲ್ಲ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ನಿರ್ಮಾಪಕರು ನೀಡಿದ ಚೆಕ್ ಬೌನ್ಸ್ ಆದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.
ಒಟ್ಟಿನಲ್ಲಿ ಎಐ ಬಳಸಿ ಆಧುನಿಕ ಟಚ್ ನೀಡಲಾದ ಸೂಪರ್ಸ್ಟಾರ್ ಅಭಿನಯದ ಕೊಚಾಡಿಯನ್ ಸಿನಿ ರಸಿಕರಿಗೆ ಮತ್ತೆ ಮನರಂಜನೆ ನೀಡಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

