ಮಂಗಳೂರು: ಮೂಡುಶೆಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಿಳಾ ಮತ್ತು ಮಕ್ಕಳ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಕೇಂದ್ರಕ್ಕೆ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಂಗನವಾಡಿ ಮಕ್ಕಳಿಗೆ ವಿತರಿಸುವ ಪೌಷ್ಟಿಕ ಆಹಾರದ ಗುಣಮಟ್ಟ, ತಯಾರಿಕಾ ಪ್ರಕ್ರಿಯೆ ಹಾಗೂ ಸ್ವಚ್ಛತಾ ವ್ಯವಸ್ಥೆಯನ್ನು ಪರಿಶೀಲಿಸಲಾಯಿತು. ಪುಷ್ಠಿ ಆಹಾರ, ಮಿಲ್ಲೆಟ್ ಲಡ್ಡು ಪೌಡರ್ ಮತ್ತು ಸಾಂಬಾರ್ ಪೌಡರ್ನ ಮಾದರಿಗಳನ್ನು ಸಂಗ್ರಹಿಸಿ ಅಧಿಕೃತ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ.
ಪ್ಯಾಕಿಂಗ್ನಲ್ಲಿ ಯಂತ್ರೋಪಕರಣ ಬಳಕೆ, ಗುಣಮಟ್ಟದ ಫುಡ್ಗ್ರೇಡ್ ಪ್ಲಾಸ್ಟಿಕ್ ಹಾಗೂ ತಯಾರಿಕಾ ದಿನಾಂಕ, ಅವಧಿ ಮುಕ್ತಾಯ ದಿನಾಂಕ ಮತ್ತು ಬ್ಯಾಚ್ ನಂಬರ್ ಸೇರಿದಂತೆ ಕಡ್ಡಾಯ ಲೇಬಲಿಂಗ್ ಪಾಲಿಸುವಂತೆ ಸೂಚಿಸಲಾಗಿದೆ.
ಪ್ರಯೋಗಾಲಯದ ವರದಿ ಆಧರಿಸಿ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

