ಕುಂದಾಪುರ : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಕಳೆದ 10 ವರ್ಷಗಳ ಅವಧಿಯಲ್ಲಿ ನಡೆಸಿದ ಸಮಗ್ರ ಕಾರ್ಯಕ್ಷಮತೆ ಮೌಲ್ಯಮಾಪನದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ಪೊಲೀಸ್ ಉಪವಿಭಾಗದ ಬೈಂದೂರು ವೃತ್ತಕ್ಕೆ ಒಳಪಡುವ ಗಂಗೊಳ್ಳಿ ಪೊಲೀಸ್ ಠಾಣೆ ರಾಜ್ಯದ ಅತ್ಯುತ್ತಮ 10 ಪೊಲೀಸ್ ಠಾಣೆಗಳಲ್ಲಿ 7ನೇ ಸ್ಥಾನ ಪಡೆದು ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಾಧನೆಯು ಜಿಲ್ಲಾ ಪೊಲೀಸ್ ಇಲಾಖೆಗೆ ಮತ್ತು ಸಾರ್ವಜನಿಕರಿಗೆ ಅಪಾರ ಹೆಮ್ಮೆ ತಂದಿದೆ.
14 ಮಾನದಂಡಗಳ ಆಧಾರದ ಮೇಲೆ ಮೌಲ್ಯಮಾಪನ
ಪೊಲೀಸ್ ಇಲಾಖೆಯು 2016 ಜನವರಿ 1ರಿಂದ 10 ವರ್ಷಗಳ ಅವಧಿಯಲ್ಲಿ ಠಾಣೆಗಳ ಕಾರ್ಯವೈಖರಿಯನ್ನು ಪರಿಶೀಲಿಸಲು 14 ಪ್ರಮುಖ ಕಾರ್ಯಕ್ಷಮತೆ ಸೂಚಕಗಳನ್ನು (KPI) ಮಾನದಂಡವಾಗಿಟ್ಟುಕೊಂಡು ಒಟ್ಟು 100 ಅಂಕಗಳಿಗೆ ಮೌಲ್ಯಮಾಪನ ನಡೆಸಿತ್ತು.
ಪರಿಗಣಿಸಲಾದ ಪ್ರಮುಖ ಅಂಶಗಳು:
- ಅಪರಾಧಗಳ ಪತ್ತೆ ಹಚ್ಚುವಿಕೆ ಹಾಗೂ ಪ್ರಕರಣಗಳ ತ್ವರಿತ ವಿಲೇವಾರಿ.
- ಅಪಘಾತಗಳ ಸಂಖ್ಯೆ ಇಳಿಮುಖ ಮತ್ತು ಕೋಮುಗಲಭೆ ಮುಂತಾದ ಸೂಕ್ಷ್ಮ ಸಮಸ್ಯೆಗಳ ಪರಿಣಾಮಕಾರಿ ನಿಯಂತ್ರಣ.
- ಇ-ಬೀಟ್, ಇ-ಸಾಕ್ಷ್ಯ, ಇ-ಸಮನ್ಸ್ ಹಾಗೂ ರೌಡಿಶೀಟರ್ ದಾಖಲೆಗಳ ಅಚ್ಚುಕಟ್ಟು ನಿರ್ವಹಣೆ.
- ಮಾದಕ ದ್ರವ್ಯ ತಡೆ ಕಾಯ್ದೆ ಅನುಷ್ಠಾನ, ‘ಆಮೇಲೆ ಆಸರೆ’, ಒಂಟಿ ನಾಗರಿಕರ ಸುರಕ್ಷತೆ ಹಾಗೂ ‘ಸಮಿಶ್ರ’ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನ.
- ಸಾರ್ವಜನಿಕರ ದೂರು-ಅರ್ಜಿಗಳಿಗೆ ತಕ್ಷಣದ ಸ್ಪಂದನೆ ಮತ್ತು ಪೊಲೀಸ್-ಸಾರ್ವಜನಿಕರ ನಡುವಿನ ಉತ್ತಮ ಬಾಂಧವ್ಯ.
ಒಟ್ಟು 67.22 ಸ್ಕೋರ್ ಗಳಿಸಿ ಏಕೈಕ ಠಾಣೆಯಾಗಿ ಹೊರಹೊಮ್ಮಿದ ಗಂಗೊಳ್ಳಿ
ಮೌಲ್ಯಮಾಪನದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯು ಒಟ್ಟು 67.22 ಅಂಕಗಳನ್ನು (Score) ಗಳಿಸುವ ಮೂಲಕ 7ನೇ ಸ್ಥಾನ ಪಡೆದುಕೊಂಡಿದ್ದು, ಉಡುಪಿ ಜಿಲ್ಲೆಯಿಂದ ಟಾಪ್ 10 ಪಟ್ಟಿಯಲ್ಲಿ ಜಾಗ ಪಡೆದ ಏಕೈಕ ಪೊಲೀಸ್ ಠಾಣೆ ಎನಿಸಿಕೊಂಡಿದೆ.
ರಾಜ್ಯದ ಟಾಪ್ 10 ಪೊಲೀಸ್ ಠಾಣೆಗಳ ವಿವರ:
- ಯಾಪಲದಿನ್ನಿ ಪೊಲೀಸ್ ಠಾಣೆ (ರಾಯಚೂರು ಜಿಲ್ಲೆ – ಪ್ರಥಮ ಸ್ಥಾನ)
- ನಂಜನಗೂಡು ಗ್ರಾಮಾಂತರ ಠಾಣೆ (ಮೈಸೂರು)
- ನರೇಗಲ್ ಠಾಣೆ (ಗದಗ)
- ಶಕ್ತಿನಗರ ಠಾಣೆ (ರಾಯಚೂರು)
- ಹುಲಸೂರು ಠಾಣೆ (ಬೀದರ್)
- ಮುಳಗುಂದ ಠಾಣೆ (ಗದಗ)
- ಗಂಗೊಳ್ಳಿ ಠಾಣೆ (ಉಡುಪಿ)
- ನರಗುಂದ ಠಾಣೆ (ಗದಗ)
- ಇಡಪನೂರು ಠಾಣೆ (ರಾಯಚೂರು)
- ಗದಗ ನಗರ ಠಾಣೆ (ಗದಗ)

