ನಟ ಶಿವರಾಜ್ಕುಮಾರ್ ಅವರು ಚಿಕಿತ್ಸೆಗಾಗಿ ಅಮೆರಿಕಗೆ ಪ್ರಯಾಣ ಬೆಳೆಸಿದ್ದಾರೆ. ಏರ್ಪೋರ್ಟ್ ಪ್ರವೇಶಿಸುವ ಮುನ್ನ ಅಭಿಮಾನಿಗಳತ್ತ ಶಿವಣ್ಣ ಕೈ ಬೀಸುತ್ತಾ ಭಾವುಕರಾಗಿದ್ದಾರೆ.
ಡಿ.24ರಂದು ಶಿವಣ್ಣಗೆ ಯುಎಸ್ನಲ್ಲಿ ಸರ್ಜರಿ ನಡೆಯಲಿದೆ. ಈ ಹಿನ್ನೆಲೆ ಪತ್ನಿ ಮತ್ತು ಮಗಳು ನಿವೇದಿತಾ ಜೊತೆ ಅಮೆರಿಕಗೆ ಪ್ರಯಾಣ ಬೆಳೆಸಿದ್ದಾರೆ. ಬೆಂಗಳೂರಿನ ಏರ್ಪೋರ್ಟ್ ಪ್ರವೇಶಿಸುವ ಮುನ್ನ ಭಾವುಕರಾಗಿ ಅಭಿಮಾನಿಗಳತ್ತ ನಟ ಕೈ ಬೀಸಿದ್ದಾರೆ.
ಸರ್ಜರಿಯ ಬಳಿಕ ಮುಂದಿನ ತಿಂಗಳು ಜನವರಿ 26ರಂದು ಬೆಂಗಳೂರಿಗೆ ಹಿಂದಿರುಗಲಿದ್ದಾರೆ. ಆ ನಂತರ ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳಲ್ಲಿ ಅವರು ಆಕ್ಟೀವ್ ಆಗಲಿದ್ದಾರೆ.

