ಅಶ್ಲೀಲ ಪದ ಬಳಕೆ ಆರೋಪದ ಹಿನ್ನಲೆಯಲ್ಲಿ ಬಂಧನಕ್ಕೆ ಒಳಗಾಗಿರುವ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಅವರನ್ನು ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶಿಸಿದೆ.
ಸಿ.ಟಿ ರವಿ ಪರ ಹಿರಿಯ ವಕೀಲರಾದ ಅಶೋಕ್ ಹಾರನಹಳ್ಳಿ ಅವರು ವಾದ ಮಂಡಿಸಿದರು. ದೂರು ನೀಡಿದವರ ಸಹಿಯೇ ದೂರಿನಲ್ಲಿಲ್ಲ, ಎಫ್ ಐ ಆರ್ ನಲ್ಲಿ ಫಿರ್ಯಾದಿ ಲಕ್ಷ್ಮಿ ಹೆಬ್ಬಾಳ್ಕರ್ ಸಹಿ ಇಲ್ಲ, ಬಂಧನದ ಕಾರಣವನ್ನು ಅರೆಸ್ಟ್ ಮೆಮೋದಲ್ಲಿ ನೀಡಿಲ್ಲ, ಸಾಕ್ಷಿ ನಾಶ ಮಾಡಬಹುದೆಂದು ಹೇಳಿ ಸಿ.ಟಿ ರವಿ ಅವರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ, ಆದರೆ ಸಾಕ್ಷಿಗಳೆಲ್ಲ ಆಡಳಿತ ಪಕ್ಷದವರು ಹೇಗೆ ಸಾಕ್ಷಿ ನಾಶಪಡಿಸಲು ಸಾಧ್ಯ?, ಬಂಧನವೆ ಅಕ್ರಮ ಈ ಎಲ್ಲಾ ಅಂಶಗಳನ್ನು ಇಟ್ಟುಕೊಂಡು ವಾದ ಮಾಡಲಾಯಿತು.
ಜನಪ್ರತಿನಿಧಿಗಳ ನ್ಯಾಯಾಲಯ ವಿಚಾರಣೆ ನಾಳೆಗೆ ಮುಂದೂಡಿತ್ತು, ಆದರೆ ಹೈಕೋರ್ಟ್ ಬಿಡುಗಡೆಗೆ ಆದೇಶಿಸಿ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

