ಐಪಿಎಲ್ ಗಾಗಿ ಕ್ರಿಕೆಟ್ ಅಭಿಮಾನಿಗಳು ಅತ್ಯಂತ ಕುತೂಹಲದಿಂದ ಕಾಯುತ್ತಿದ್ದಾರೆ. ಬರುವ ಮಾರ್ಚ್ ನಲ್ಲಿ ಐಪಿಎಲ್ ಪ್ರಾರಂಭವಾಗುತ್ತಿದೆ. ಈ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಬದಲಾಗಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಯಾರು ಈ ಪಟ್ಟ ಅಲಂಕರಿಸಲಿದ್ದಾರೆ ಅನ್ನೋ ಕ್ಯೂರಾಸಿಟಿಯೂ ಹೆಚ್ಚಿತ್ತು. ಇದೀಗ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
ಹೌದು. ಆರ್ ಸಿಬಿ ತಂಡದ ನಾಯಕನಾಗಿ ರಜತ್ ಪಾಟಿದಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಮೂವತ್ತೊಂದು ವರ್ಷ ವಯಸ್ಸಿನ ತರುಣ ಟೀಂನ್ನು ಹೇಗೆ ನಿಭಾಯಿಸ್ತಾರೆ ಅಂತ ಕಾದುನೋಡಬೇಕು. ಇವರು ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಧ್ಯಪ್ರದೇಶ್ ತಂಡದ ಸಾರಥ್ಯವನ್ನು ವಹಿಸಿದ್ದರು. ಇದೀಗ ಅವರಿಗೆ ಈ ತಂಡವನ್ನು ನಿಭಾಯಿಸುವ ಅದೃಷ್ಟ ಖುಲಾಯಿಸಿದೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿ ಮಾತನಾಡಿದ ವಿರಾಟ್ ಕೊಹ್ಲಿ ರಜತ್ ಈ ಸ್ಥಾನಕ್ಕೆ ಅರ್ಹ. ಅವರಿಗೆ ನಾಯಕ ಪಟ್ಟ ಸಿಕ್ಕಿದ್ದು ತುಂಬಾ ಖುಷಿಯಾಗುತ್ತಿದೆ. ನೀವು ಆರ್ ಸಿಬಿ ಅಭಿಮಾನಿಗಳ ಹೃದಯವನ್ನು ಕದ್ದಿದ್ದೀರಿ. ನಿಮ್ಮ ಜೊತೆ ನಾವಿದ್ದೇವೆ ಎಂದು ಹೇಳಿದ್ದಾರೆ.

