ಉಡುಪಿ: ಆಭರಣ ಜ್ಯುವೆಲ್ಲರ್ಸ್ ನ ಎಲ್ಲಾ ಶೋರೂಂಗಳಿಗೆ ವಿವಿಧ ಹುದ್ದೆಗಳಿಗೆ ತಕ್ಕಂತೆ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಉದ್ಯೋಗಕ್ಕೆ ತಕ್ಕಂತೆ ವಿವಿಧ ಸೌಲಭ್ಯಗಳನ್ನೂ ಪೂರೈಸಲಾಗುತ್ತದೆ.
ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಹುದ್ದೆಗೆ ಪುರುಷ ಅಭ್ಯರ್ಥಿಗಳು ಬೇಕಾಗಿದ್ದಾರೆ. ಇವರಿಗೆ ಗ್ರಾಹಕರನ್ನು ನಿರ್ವಹಿಸುವ ಪರಿಣತಿ ಇರಬೇಕು. ವಯೋಮಿತಿ ೩೦ ವರ್ಷ, ವಿದ್ಯಾರ್ಹತೆ ಪಿಯು, ಹತ್ತನೆ ತರಗತಿ ಅಥವಾ ಪದವಿ ಪೂರೈಸಿರಬೇಕು. ಆಕರ್ಷಕ ವೇತನದ ಜೊತೆಗೆ ಉಚಿತ ಊಟದ ವ್ಯವಸ್ಥೆ. ಆಸುಪಾಸಿನವರಿಗೆ ಮೊದಲ ಆದ್ಯತೆ. ಆಸಕ್ತ ಅಭ್ಯರ್ಥಿಗಳು ಇತ್ತೀಚಿನ ಭಾವಚಿತ್ರದ ಜೊತೆಗೆ ಅಗತ್ಯ ದಾಖಲೆಗಳನ್ನು ಹತ್ತು ದಿನದ ಒಳಗೆ ಅರ್ಜಿ ಸಲ್ಲಿಸಬೇಕು.
ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಅಭ್ಯರ್ಥಿಗಳು ಬೇಕಾಗಿದ್ದು ಅರ್ಜಿ ಸಲ್ಲಿಸುವವರು ಯಾವುದಾದರೂ ವಿಷಯದಲ್ಲಿ ಡಿಗ್ರಿ ಪೂರ್ಣಗೊಳಿಸಿರಬೇಕು. ಅರ್ಜಿ ಸಲ್ಲಿಸುವವರು ಇಪ್ಪತ್ನಾಲ್ಕು ವರ್ಷ ವಯಸ್ಸಿನವರಾಗಿರಬೇಕು. ಗ್ರಾಹಕರನ್ನು ನಿರ್ವಹಿಸುವ ಪರಿಣತಿ ಇರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಅರ್ಜಿ ಸಲ್ಲಿಸುವವರು ಆಭರಣ ಜ್ಯುವೆಲ್ಲರ್ಸ್ ಪ್ರೈವೇಟ್ ಲಿಮಿಟೆಡ್ ಕಾರ್ಪೊರೇಶನ್ ಬ್ಯಾಂಕ್ ರಸ್ತೆ ಉಡುಪಿ ಇಲ್ಲಿಗೆ ಅರ್ಜಿ ಸಲ್ಲಿಸಬಹುದು. ಅಥವಾ hr@abharan.com ಈ ಇಮೇಲ್ ಗೆ ಕೂಡಾ ಅರ್ಜಿ ಹಾಕಬಹುದು. ಹೆಚ್ಚಿನ ಮಾಹಿತಿಗೆ 7259879777 ಈ ನಂಬರನ್ನು ಸಂಪರ್ಕಿಸಿ


