ಬೇಸಿಗೆಯಲ್ಲಿ ನಾವು ಸೇವಿಸುವ ಅನೇಕ ಹಣ್ಣುಗಳಲ್ಲಿ ಪಪ್ಪಾಯ ಹಣ್ಣು ಕೂಡಾ ಒಂದು. ರಸಭರಿತವಾಗಿ ಅತ್ಯಂತ ರುಚಿಕರವಾಗಿರುತ್ತದೆ. ಪಪ್ಪಾಯ ಹಣ್ಣನ್ನು ನಾವು ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಪ್ಯಾಕ್ ರೀತಿಯಲ್ಲಿ ಬಳಸಿಕೊಳ್ಳುತ್ತೇವೆ. ಆದರೆ ಇದು ತೂಕ ಇಳಿಕೆಗೂ ಸಹಾಯ ಮಾಡುತ್ತೆ ಅಂದ್ರೆ ನಂಬ್ತೀರಾ…?
ಈ ಹಣ್ಣು ಗರಿಷ್ಠ ಪ್ರಮಾಣದಲ್ಲಿ ಫೈಬರ್ ಅಂಶವನ್ನು ಹೊಂದಿರುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಕಡಿಮೆ ಕ್ಯಾಲೋರಿ ಇದ್ದು ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯ ಸೇವಿಸುವುದು ಕೂಡಾ ಅತ್ಯಂತ ಒಳ್ಳೆಯದು. ಆದರೆ ಅಧಿಕವಾಗಿ ತಿನ್ನುವುದರಿಂದ ಅನೇಕ ಸಮಸ್ಯೆಗಳು ಕೂಡಾ ಸೃಷ್ಟಿಯಾಗಬಹುದು. ಹಸಿ ಅಥವಾ ಮಾಗಿದ ಪಪ್ಪಾಯ ಎರಡೂ ದೇಹಕ್ಕೆ ಉತ್ತಮ.
ಪಪ್ಪಾಯದಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಸಮೃದ್ಧವಾಗಿರುವುದರಿಂದ ಕೂದಲಿನ ಅಂಗಾಂಶವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಮಲಬದ್ಧತೆಯಂತಹ ಸಮಸ್ಯೆ ನಿವಾರಿಸಲು ಕೂಡಾ ಇದು ಅತ್ಯಂತ ಪರಿಣಾಮಕಾರಿ.

