ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಇದರಿಂದ ಅಭಿಮಾನಿಗಳಿಗೆ ನಿರಾಸೆ ತಂದಿದೆ. ಇನ್ನು ಮುಂದಿನ ದಿನಗಳಲ್ಲಿ ಏಕದಿನ ಪಂದ್ಯದಲ್ಲಿ ಮಾತ್ರ ಆಡುವುದಾಗಿ ಘೋಷಣೆ ಮಾಡಿದ್ದಾರೆ.
ಇವರ ವೃತ್ತಿ ಬದುಕಿನ ಮೇಲಿದ್ದ ಊಹಾಪೋಹಗಳಿಗೆ ಸ್ವತಃ ಅವರೇ ತೆರೆ ಎಳೆದಿದ್ದಾರೆ. ನಿವೃತ್ತಿ ನೀಡುವ ವಿಚಾರವನ್ನು ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಹಿಟ್ ಮ್ಯಾನ್ ಎಂದೇ ಫೇಮಸ್ ಆಗಿರುವ ರೋಹಿತ್ ಶರ್ಮಾ ಅವರು ನಾಯಕತ್ವ ವಹಿಸಿಕೊಳ್ತಾರೆ ಎಂಬ ವದಂತಿ ಹುಟ್ಟಿತ್ತು. ಭಾರತದ ಪರ ನಂಬಿಕೆಯ ಬ್ಯಾಟ್ಸ್ ಮನ್ ಆಗಿದ್ದರು. ಇದೀಗ ಇವರ ನಿರ್ಧಾರ ಕ್ರೀಡಾಭಿಮಾನಿಗಳಿಗೆ ನಿಜಕ್ಕೂ ಬೇಸರ ತಂದಿದೆ.

