ನವದೆಹಲಿ: ಪಾಕಿಸ್ತಾನದ ವಿರುದ್ಧ ಇತ್ತೀಚೆಗೆ ನಡೆಸಲಾದ ಯಶಸ್ವಿ ಸೇನಾ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಸೈನಿಕರನ್ನು ಹೊಗಳಿ ಪ್ರಧಾನಿ ನರೇಂದ್ರ ಮೋದಿಯವರು `ಸಿಂಧೂರವು ಸಿಡಿಮದ್ದಾದಾಗ ಏನಾಗುತ್ತೆ ನೋಡ್ರಿದಲ್ವಾ…? ಇದೇ ನಮ್ಮ ತಾಕತ್ತು. ಇನ್ಮುಂದೆ ಬಂದ್ರೂ ಹೀಗೆ ಉತ್ತರ ಕೊಡಲು ನಾವು ಸಿದ್ಧ’ ಎಂದು ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಆಪರೇಷನ್ ಸಿಂಧೂರದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ ಪ್ರಧಾನಿ ಮೋದಿ ಯಾರು ಸಿಂಧೂರವನ್ನು ಅಳಿಸಲು ಪ್ರಯತ್ನಿಸಿದರೋ ಅವರೇ ಧೂಳಾಗಿ ಹೋದ್ರು ಎಂದು ಮಾರ್ಮಿಕವಾಗಿ ನುಡಿದರು.
ನನ್ನ ಧಮನಿಗಳಲ್ಲಿ ಹರಿಯುತ್ತಿರೋದು ರಕ್ತವಲ್ಲ, ಅದು ಸಿಂಧೂರ. ಭಾರತೀಯ ಸೇನೆ ಪಾಕಿಸ್ತಾನವನ್ನು ಭಾರತದ ಮುಂದೆ ಮಂಡಿಯೂರುವಂತೆ ಮಾಡಿದೆ ಎಂದು ಹೆಮ್ಮೆಯಿಂದ ಮಾತನಾಡಿದರು.


