ಶಿವಮೊಗ್ಗ: ನಿನ್ನೆ ನಡೆದ ಐಪಿಎಲ್ ಅಂತಿಮ ಪಂದ್ಯದಲ್ಲಿ ಆರ್ ಸಿಬಿ ತಂಡ ಜಯಭೇರಿ ಗಳಿಸಿದ ಹಿನ್ನೆಲೆ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಈ ಸಂದರ್ಭ ನಡೆದ ಬೈಕ್ ರ್ಯಾಲಿಯಲ್ಲಿ ದುರಂತವೊಂದು ಸಂಭವಿಸಿದ್ದು ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟಿದ್ದಾನೆ.
ವೆಂಕಟೇಶ್ ನಗರದ ನಿವಾಸಿ, ಇಪ್ಪತ್ತೊಂದು ವರ್ಷದ ಅಭಿನಂದನ್ ಮೃತ ದುರ್ದೈವಿ. ಆರ್ ಸಿಬಿ ವಿಜಯೋತ್ಸವಕ್ಕಾಗಿ ಯುವಕರ ತಂಡ ಬೈಕ್ ರ್ಯಾಲಿಯನ್ನು ಆಯೋಜನೆ ಮಾಡಿತ್ತು. ಮೆರವಣಿಗೆಯ ಸಂದರ್ಭ ಎರಡು ಬೈಕ್ ಗಳು ಮುಖಾಮುಖಿ ಢಿಕ್ಕಿ ಹೊಡೆದಿದ್ದು ತೀವ್ರ ಗಾಯಗೊಂಡ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ರ್ಯಾಲಿಯಲ್ಲಿ ಅನೇಕ ಜನರು ಪಾಲ್ಗೊಂಡಿದ್ದು ನೂಕುನುಗ್ಗಲು ಕೂಡಾ ಕಂಡುಬಂದಿತ್ತು. ಆಸ್ಪತ್ರೆಗೆ ಸಾಗಿಸಬೇಕು ಎನ್ನುವಷ್ಟರಲ್ಲಿ ಅಭಿನಂದನ್ ಮೃತಪಟ್ಟಿದ್ದಾರೆ.


