ಮೇಷ: ಯಾವುದಾದರೂ ಆಟಗಳಲ್ಲಿ ನಿಮ್ಮನ್ನು ತೊಡಗಿಕೊಳ್ಳಿ. ಇಂದು ನಿಮಗೆ ಸ್ವಲ್ಪ ಆರ್ಥಿಕ ಪ್ರತಿಫಲ ತರುತ್ತದೆ. ಮನೆಯ ಕಿರಿಯ ಸದಸ್ಯರೊಂದಿಗೆ ಸಮಯ ಕಳೆಯಲು ಕಲಿಯಬೇಕು.
ವೃಷಭ: ಸೃಜನಶೀಲ ಕೆಲಸ ನಿಮ್ಮನ್ನು ಶಾಂತವಾಗಿರಿಸುತ್ತದೆ. ತಮ್ಮ ಹಣವನ್ನು ಇನ್ನೊಬ್ಬರಿಗೆ ನೀಡಲು ಇಷ್ಟ ಪಡುವುದಿಲ್ಲ. ಮೊಬೈಲ್ ನಲ್ಲಿ ವೆಬ್ ಸರಣಿ ನೋಡುತ್ತೀರಿ.
ಮಿಥುನ: ನಿಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳಿ. ಮನೆಯವರೊಂದಿಗೆ ಸಲಹೆಯನ್ನು ತೆಗೆದುಕೊಳ್ಳಿ. ಪ್ರೀತಿಪಾತ್ರರು ನಿಮ್ಮಿಂದ ಏನನ್ನೋ ಬೇಡಿಕೊಳ್ಳುತ್ತಾರೆ.
ಕರ್ಕಾಟಕ: ನಿಮ್ಮ ಮಗುವಿನಂಥ ಸ್ವಭಾವ ಕಾಣಿಸಿಕೊಳ್ಳುತ್ತದೆ. ಪ್ರಣಯದ ನಡತೆಗಳು ಫಲ ನೀಡುವುದಿಲ್ಲ. ಮನೆಯ ಚಿಂತೆಗಳು ಉದ್ವೇಗ ತರಬಹುದು.
ಸಿಂಹ: ಖರ್ಚುಗಳಲ್ಲಿ ತುಂಬಾ ಉದಾರಿಯಾಗದಿರಲು ಪ್ರಯತ್ನಿಸಿ. ಭಾವನಾತ್ಮಕ ಅಪಾಯ ನಿಮ್ಮ ಪರವಾಗಿರುತ್ತದೆ. ಪ್ರೀತಿಯ ಜೀವನದಲ್ಲಿ ಅದ್ಭುತ ದಿನವಾಗಿದೆ.
ಕನ್ಯಾ: ಜೊತೆಗಿರುವವರ ಜೊತೆ ವಾದ ವಿವಾದಕ್ಕೆ ಬೀಳಬೇಡಿ. ಭಿನ್ನಾಭಿಪ್ರಾಯವಿದ್ದಲ್ಲಿ ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳಿ. ಸಂಗಾತಿಯ ನಡುವೆ ವಿಶ್ವಾಸದ ಕೊರತೆಯಿರುತ್ತದೆ.
ತುಲಾ: ಆರೋಗ್ಯಪೂರ್ಣವಾಗಿರುತ್ತದೆ. ನಿಮ್ಮ ದಿನವನ್ನು ಎಚ್ಚರಿಕೆಯಿಂದ ಆಯೋಜಿಸಿ. ಸಂಗಾತಿಯಿಂದ ವ್ಯತಿರಿಕ್ತ ಪ್ರತಿಕ್ರಿಯೆ ಮಾಡಬಹುದು.
ವೃಶ್ಚಿಕ: ಹೊರಗಿಟ್ಟ ಆಹಾರ ತಿನ್ನುವಾಗ ಎಚ್ಚರಿಕೆ. ಅನಗತ್ಯ ಒತ್ತಡ ನಿಮಗೆ ಮಾನಸಿಕ ಉದ್ವೇಗ ಉಂಟು ಮಾಡುತ್ತದೆ. ಪ್ರೀತಿಯಲ್ಲಿ ನಿರಾಶೆ ನಿಮ್ಮನ್ನು ಕಂಗೆಡಿಸುವುದಿಲ್ಲ.
ಧನಸ್ಸು: ಹಣದ ಲಾಭವನ್ನು ಪಡೆಯಬಹುದು. ಹೊಸ ಹೂಡಿಕೆಗಳನ್ನು ಮಾಟುವಾಗ ಸ್ವತಂತ್ರರಾಗಿರಿ. ಕಾರಣವಿಲ್ಲದ ವಿವಾದಗಳಲ್ಲಿ ಬೀಳಬೇಡಿ.
ಮಕರ: ಆರಾಮವಾಗಿ ವವಿಶ್ರಾಂತಿ ಪಡೆಯಬೇಕು. ನಿಮ್ಮ ಪ್ರಿಯತಮೆಯ ಜೊತೆ ಸಭ್ಯತೆಯಿಂದ ವರ್ತಿಸಿ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಬಹುದು.
ಕುಂಭ: ನಿಮ್ಮ ಪ್ರಯತ್ನದಲ್ಲಿ ನೀವು ಯಶಸ್ವಿಯಾಗಬಹುದು. ನಿಮ್ಮ ದಿನವು ಪ್ರೀತಿಪಾತ್ರರ ನಗುವಿನಿಂದ ಪ್ರಾರಂಭವಾಗುತ್ತದೆ. ನೀವು ಮನೆಯಲ್ಲಿ ಸಣ್ಣಪುಟ್ಟ ಪಾರ್ಟಿ ಆಯೋಜಿಸಬಹುದು.
ಮೀನ: ಆರೋಗ್ಯ ಸಂಬಂಧಿತ ಸಮಸ್ಯೆಗಳು ಅಸ್ವಸ್ಥತೆಯನ್ನು ಉಂಟುಮಾಡಬಹುದು. ಸಮಯಕ್ಕೆ ನೀವು ಜಾಗರೂಕರಾಗಿದ್ದರೆ ಉತ್ತಮ. ಧಾರ್ಮಿಕ ಮತ್ತು ಶುದ್ಧ ಪ್ರೀತಿಯನ್ನು ಅನುಭವಿಸಿ.


