ಕುಂದಾಪುರ: ಆರೋಗ್ಯವಾಗಿದ್ದ ವ್ಯಕ್ತಿಗೆ ದಿಢೀರ್ ಎದೆನೋವು ಕಾಣಿಸಿಕೊಂಡು ಸಾವನ್ನಪ್ಪಿದ ಅಚ್ಚರಿಕರ ಘಟನೆ ಕುಂದಾಪುರದಲ್ಲಿ ನಡೆದಿದೆ. ಹಂಗಳೂರು ಗ್ರಾಮದ ಮೂವತ್ತೈದು ವರ್ಷದ ಶರತ್ ಅವರು ಮೃತಪಟ್ಟ ದುರ್ದೈವಿ.
ಇವರು ರಾತ್ರಿ ಮನೆಯಲ್ಲಿ ಎಂದಿನಂತೆ ಸಹಜವಾಗಿ ಊಟ ಮಾಡಿ ಮಲಗಿದ್ದರು. ಬೆಳಗಿನ ಜಾವ ಎದೆನೋವು ಕಾಣಿಸುತ್ತಿದೆ ಎಂದು ಹೇಳಿ ವಾಂತಿ ಕೂಡಾ ಮಾಡಿಕೊಂಡರು.
ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ವೈದ್ಯರು ಪರೀಕ್ಷಿಸಿ ಶರತ್ ಸಾವನ್ನಪ್ಪಿರುವುದನ್ನು ದೃಢಪಡಿಸಿದ್ದಾರೆ. ಪ್ರಕರಣ ದಾಖಲಾಗಿದೆ. ಆರೋಗ್ಯವಾಗಿದ್ದ ಯುವಕ ಇದ್ದಕಿದ್ದಂತೆ ಎದೆನೋವಿನಿಂದ ಸಾವನ್ನಪ್ಪಿರುವುದಕ್ಕೆ ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

