ಮುರುಡೇಶ್ವರ: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಲಾಡ್ಜ್ ಮೇಲೆ ಪೊಲೀಸರು ದಾಳಿ ನಡೆಸಿ ಓರ್ವ ಮಹಿಳೆಯನ್ನು ರಕ್ಷಿಸಿದ ಘಟನೆ ಮುರುಡೇಶ್ವರದಲ್ಲಿ ನಡೆದಿದೆ. ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಗಣೇಶ್ ನಾಯ್ಕ್, ರೆಸಿಡೆನ್ಸಿ ಮಾಲೀಕ ವಿನಾಯಕ ಮಹಾದೇವ್ ನಾಯ್ಕ್, ಆಕಾಶ್ ಅನಿಲ್ ಬಂಧಿತ ಆರೋಪಿಗಳು. ಕೋಲ್ಕತ್ತಾ ಮೂಲದ ಮಹಿಳೆಯನ್ನು ಪೊಲೀಸರು ಬಚಾವು ಮಾಡಿದ್ದಾರೆ.
ದಾಳಿ ನಡೆಸಿದ ಸಂದರ್ಭ ಬಂಧಿತರಿಂದ ೪೬೩೦ ರೂ ನಗದು, ಕಾಂಡೋಮ್ ಪ್ಯಾಕೆಟ್, ಒಂದು ಬೈಕ್ ವಶಕ್ಕೆ ಪಡೆದಿದ್ದಾರೆ. ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

