ಪಡುಬಿದ್ರಿ: ಕಾರೊಂದು ಪಾದಾಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಗಂಭೀರ ಗಾಯಗೊಂಡಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ.
ಗಾಯಗೊಂಡ ವ್ಯಕ್ತಿಯನ್ನು ಹಳೆಯಂಗಡಿ ಇಂದಿರಾ ನಗರ ನಿವಾಸಿ ಸಂಶುದ್ದೀನ್ ಎಂದು ಗುರುತಿಸಲಾಗಿದೆ.
ಇವರ ತಲೆಗೆ ಗಂಭೀರ ಗಾಯಗೊಂಡರೆ, ಕಾಲಿನ ಎಲುಬು ತುಂಡಾಗಿದೆ. ಇವರು ಹೆಚ್ಚಾಗಿ ಎರ್ಮಾಳು ಮಸೀದಿ ಬಳಿ ಇರುತ್ತಿದ್ದಾರೆ ಎಂಬುದಾಗಿ ಸ್ಥಳೀಯ ತಿಳಿಸಿದ್ದಾರೆ. ಅಪಘಾತ ನಡೆಸಿದ ಕಾರು ರಸ್ತೆ ವಿಭಜಕವೇರಿ ನಿಂತಿದೆ. ಸ್ಥಳಕ್ಕೆ ಬಂದ ಹೆಜಮಾಡಿ ಟೋಲ್ ಸಿಬ್ಬಂದಿಗಳು ಸಂಚಾರಕ್ಕೆ ಅಡಚಣೆಯಾಗುತ್ತಿದ್ದ ಕಾರನ್ನು ತೆರವುಗೊಳಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.


