ರಾಗಿ ಜೀವಕ್ಕೆ ಉತ್ತಮ. ರಾಗಿ ತಿಂದವನು ನಿರೋಗಿ ಎನ್ನುವ ಮಾತೇ ಇದೆ. ರಾಗಿಯಿಂದ ದೇಹಕ್ಕೆ, ಆರೋಗ್ಯಕ್ಕೆ ಸಿಗುವ ಅನುಕೂಲಗಳು ಅಷ್ಚಿಷ್ಟಲ್ಲ. ದೈನಂದಿನ ಆಹಾರ ಕ್ರಮದಲ್ಲಿ ರಾಗಿಗೆ ಜಾಗ ನೀಡಿದಷ್ಟು ಅನಾರೋಗ್ಯದಿಂದ ಹೆಚ್ಚು ಅಂತರ ಕಾಪಾಡಿಕೊಳ್ಳಬಹುದು ಎನ್ನುವುದು ನಮ್ಮ ಹಿರಿಯರು ಕಂಡುಕೊಂಡ ಸತ್ಯ.
ರಾಗಿ ಉತ್ತಮ ಗುಣಮಟ್ಟದ ಸಸ್ಯಜನ್ಯ ಪ್ರೊಟೀನ್ ಅನ್ನು ದೇಹಕ್ಕೆ ಒದಗಿಸುವ ಕೆಲಸ ಮಾಡುತ್ತದೆ. ರಾಗಿಯಲ್ಲಿ 5 – 30 ಪಟ್ಟು ಹೆಚ್ಚು ಕ್ಯಾಲ್ಸಿಯಂ ಅಂಶವಿದೆ. ಇದರ ಜೊತೆಗೆ ರಂಜಕ, ಪೊಟಾಸಿಯಂ ಮತ್ತು ಕಬ್ಬಿಣದ ಅಂಶಗಳು ಸಮೃದ್ಧವಾಗಿವೆ.
ಅಮೆರಿಕದ ನ್ಯಾಷನಲ್ ಅಕಾಡೆಮಿಸ್ ಪ್ರಕಟಿಸಿದ “ದಿ ಲಾಸ್ಟ್ ಕ್ರಾಪ್ಸ್ ಆಫ್ ಆಫ್ರಿಕಾ” ಎಂಬ ಅಧ್ಯಯನದ ಪ್ರಕಾರ, ಉಗಾಂಡ ಮತ್ತು ದಕ್ಷಿಣ ಸುಡಾನ್ನ ಜನರು ದಿನಕ್ಕೆ ಒಂದೇ ಬಾರಿ ಊಟ ಮಾಡಿದರೂ ರಾಗಿಯ ಸೇವನೆಯಿಂದಾಗಿ ದೃಢವಾದ ದೈಹಿಕ ಸಾಮರ್ಥ್ಯ ಉಳಿಸಿಕೊಂಡಿದ್ದಾರೆ ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ.
ರಕ್ತದ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಲು ರಾಗಿ ಪೂರಕ ಆಹಾರ. ರಾಗಿಯಲ್ಲಿರುವ ಗ್ಲೋಕೋಸ್ ಮಟ್ಟ ನಿಯಂತ್ರಿಸಲು ಮತ್ತು ಆಕ್ಸಿಡೇಟಿವ್ ಒತ್ತಡವನ್ನು ತಗ್ಗಿಸಲು ನೆರವಾಗುತ್ತದೆ. ಸಕ್ಕರೆ ಕಾಯಿಲೆ ಹೊಂದಿರುವ ವ್ಯಕ್ತಿಯಲ್ಲಿ ಗಾಯಗಳಾದರೆ, ಅದು ಬೇಗ ವಾಸಿಯಾಗಲು ಇದು ಸಹಕಾರಿಯಾಗಿದೆ.
ಆಹಾರ ವಿಷವಾಗುವುದಕ್ಕೆ ಕಾರಣವಾಗುವ ‘ಬ್ಯಾಸಿಲಸ್ ಸೆರಿಯಸ್’ , ಟೈಫಾಯಿಡ್ ಮಾದರಿಯ ಜ್ವರ ತರುವ ‘ಸಾಲ್ಮನೆಲ್ಲಾ’ ಹಾಗೂ ಚರ್ಮದ ಸೋಂಕಿಗೆ ಕಾರಣವಾಗುವ ‘ಸ್ಟ್ಯಾಫಿಲೋಕೊಕಸ್ ಆರಿಯಸ್’ ಎಂಬ ವೈರಾಣುಗಳ ವಿರುದ್ಧ ನೈಸರ್ಗಿಕ ರಕ್ಷಣೆ ನೀಡುತ್ತದೆ.
ರಾಗಿಯ ಹೊರಪದರದಲ್ಲಿ ಫಿನಾಲಿಕ್ ಆಮ್ಲಗಳು, ಫ್ಲೇವನಾಯ್ಡ್ಗಳು, ಟ್ಯಾನಿನ್ಗಳಂತಹ ಶಕ್ತಿಶಾಲಿ ಆಂಟಿ-ಆಕ್ಸಿಡೆಂಟ್ಗಳಿವೆ. ಇವು ಜೀವಕೋಶಗಳ ಹಾನಿಯನ್ನು ತಡೆಯುವ ಮೂಲಕ ಕ್ಯಾನ್ಸರ್ ತಡೆಗಟ್ಟಲು ಮತ್ತು ವಯಸ್ಸಾಗುವಿಕೆಯ ಲಕ್ಷಣಗಳನ್ನು ಮುಂದೂಡುವಲ್ಲಿಯೂ ಕೆಲಸ ಮಾಡುತ್ತದೆ.
ರಾಗಿ ಅತ್ಯಂತ ಸುಲಭವಾಗಿ ಜೀರ್ಣವಾಗುವ ಆಹಾರವಾಗಿದ್ದು, ಪ್ರತಿನಿತ್ಯ ರಾಗಿ ಸೇವಿಸುತ್ತಾ ಬಂದಲ್ಲಿ ದೇಹಾರೋಗ್ಯಕ್ಕೆ ಹಿತ.

