ಉಡುಪಿ : ಇ ಸಿಗರೇಟ್ ಮಾರಾಟಕ್ಕೆ ನಿಷೇಧವಿದ್ದರೂ ಮಣಿಪಾಲ ಭಾಗದಲ್ಲಿ ಮತ್ತೆ ಇ ಸಿಗರೇಟ್ ಹಾವಳಿ ಕಂಡು ಬರುತ್ತಿದೆ. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ರಸ್ತೆಯ ಬದಿ ಇರುವ ಅಂಗಡಿಯಲ್ಲಿ ಇ ಸಿಗರೇಟ್ ಮಾರಾಟ ಮಾಡುತ್ತಿದ್ದ ಕಾಸರಗೋಡು ಮೂಲದ ಮೊಹಮ್ಮದ್ ಉನೈಶ್ ಹಾಗೂ ಸಾವಿರಾರು ರೂ.ಮೌಲ್ಯದ ಇ ಸಿಗರೇಟ್ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಚಾರಣೆ ವೇಳೆ ಆರೋಪಿಯು ಇನ್ನೊಬ್ಬನೊಂದಿಗೆ ಸೇರಿಕೊಂಡು ಈ ವ್ಯವಹಾರ ಮಾಡುತ್ತಿರುವುದಾಗಿ ತಿಳಿಸಿದ್ದಾನೆ. ನಿಷೇಧಿತ ಇ ಸಿಗರೇಟ್ಗಳನ್ನು…
Author: Karavali TV
ಉಡುಪಿ : ಜಿಲ್ಲೆಯ ಒಟ್ಟು 4 ದ್ವೀಪಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರ ಸುರಕ್ಷತಾ ಹಿತದೃಷ್ಟಿಯಿಂದ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವುದು ಅಗತ್ಯವಾಗಿರುವುದರಿಂದ ಉಡುಪಿ ಆಸುಪಾಸಿನ ಕಡಲ ತೀರದಲ್ಲಿರುವ ನಾಲ್ಕು ದ್ವೀಪಗಳಿಗೆ ಯಾವುದೇ ಸಾರ್ವಜನಿಕರು ಪ್ರವೇಶಿಸದಂತೆ ಹಾಗೂ ಸೈಂಟ್ ಮೇರಿಸ್ ದ್ವೀಪಕ್ಕೆ ಸಂಜೆ 6ರಿಂದ ಬೆಳಗ್ಗೆ 6 ಗಂಟೆಯವರೆಗೆ ಸಾರ್ವಜನಿಕರು ಪ್ರವೇಶಿಸದಂತೆ ಹಾಗೂ ಯಾವುದೇ ಚಟುವಟಿಕೆಗಳನ್ನು ನಡೆಸದಂತೆ ನಿರ್ಬಂಧಿಸಿ…
ಕೊಟ್ಟಿಗೆಹಾರ : ಸರ್ಕಾರದ ನಿರ್ಬಂಧದ ನಡುವೆಯೂ ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣ ಎತ್ತಿನಭುಜದಲ್ಲಿ ಭಾನುವಾರ ಮತ್ತೆ 200ಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ. ಸರ್ಕಾರದ ನಿಯಮ, ಅರಣ್ಯ ಸಚಿವರ ಆದೇಶಕ್ಕೆ ಬೆಲೆ ಇಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ. ಸರ್ಕಾರದ ಮಟ್ಟದಲ್ಲಿ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಒಂದು ಕಾನೂನು ಮಾಡಿದರೆ, ಜಿಲ್ಲೆ-ತಾಲೂಕು ಕೇಂದ್ರದಲ್ಲಿನ ಅಧಿಕಾರಿಗಳು ಮತ್ತೊಂದು ಮಾಡುತ್ತಾರೆ. ಜನ ಸಾಮಾನ್ಯರು ಹಾಗೂ ಪ್ರಕೃತಿ ಅನುಕೂಲಕ್ಕಾಗಿ ಒಂದು ಕಾನೂನನ್ನ ಜಾರಿಗೆ ತಂದಿದ್ದರೆ ಅಧಿಕಾರಿಗಳು…
ಬಾದ್ಷಾ ಕಿಚ್ಚ ಸುದೀಪ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 51ನೇ ವರ್ಷಕ್ಕೆ ಸುದೀಪ್ ಕಾಲಿಟ್ಟಿದ್ದಾರೆ. ಅಭಿಮಾನಿಗಳ ಜೊತೆಗೆ ಭರ್ಜರಿಯಾಗಿ ಹುಟ್ಟುಹಬ್ಬ ಸೆಲೆಬ್ರೇಶನ್ ಮಾಡಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಕಿಚ್ಚ ಕೂಡ ತನ್ನ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಸುದೀಪ್ ಮ್ಯಾಕ್ಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಮ್ಯಾಕ್ಸ್ ತಂಡ ಮಾಸ್ ಸಾಂಗ್ ರಿಲೀಸ್ ಮಾಡಿದೆ. ‘ಅಪ್ಪಂಗೆ ಹುಟ್ಟಿದ್ರೆ ತೊಡೆ ತಟ್ಟಿ ಬಾರೋ’ ಎಂದು ಮ್ಯಾಕ್ಸಿಮಮ್ ಮಾಸ್ ಹಾಡಿನ ಮೂಲಕ ಫ್ಯಾನ್ಸ್ಗೆ ಸರ್ಪ್ರೈಸ್ ನೀಡಿದ್ದಾರೆ. ವಿಜಯ್…
ಉಡುಪಿ : ಸಮುದ್ರದಲ್ಲಿ ಮುಳುಗುತ್ತಿದ್ದ ಮೀನುಗಾರನ್ನು ಸ್ಥಳೀಯರು ರಕ್ಷಿಸಿದ ಘಟನೆ ಉಡುಪಿ ಜಿಲ್ಲೆಯ ಕಾಪು ಲೈಟ್ ಹೌಸ್ ಸಮೀಪದಲ್ಲಿ ನಡೆದಿದೆ. ಸಚಿನ್ ಎಂಬ ವ್ಯಕ್ತಿ ಮೀನಿಗೆ ಬಲೆ ಬೀಸುತ್ತಿದ್ದ ವೇಳೆ ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದ. ಈತನ ರಕ್ಷಣೆ ಮಾಡುವುದಕ್ಕೆ ಸತತ ಒಂದು ಗಂಟೆಗಳ ಕಾಲ ಸ್ಥಳೀಯರು ಶೋಧಕಾರ್ಯ ನಡೆಸಿದರು. ಶರ್ಮಾ, ಹರೀಶ್, ಬಾಲಕೃಷ್ಣ ಕೋಟ್ಯಾನ್, ಚಂದ್ರಶೇಖರ್ ಎಂಬವರು ಕಾರ್ಯಾಚರಣೆ ನಡೆಸಿ ವ್ಯಕ್ತಿಯನ್ನ ರಕ್ಷಿಸಿದ್ದಾರೆ.
ಉತ್ತರ ಪ್ರದೇಶ : ಗಂಡ ಹೆಂಡತಿ ಮಧ್ಯೆ ಪ್ರೀತಿಯಿರುವ ಹಾಗೆಯೇ ಜಗಳಗಳು ಸಹ ಸಾಮಾನ್ಯವಾಗಿರುತ್ತದೆ. ಊಟ ತಿಂಡಿಯ ವಿಚಾರಕ್ಕೆ, ಮಕ್ಕಳನ್ನು ನೋಡಿಕೊಳ್ಳುವ ವಿಚಾರಕ್ಕೆ ಗಂಡ-ಹೆಂಡತಿ ಮಧ್ಯೆ ಸಣ್ಣ ಪುಟ್ಟ ಜಗಳ, ಮನಸ್ಥಾಪಗಳು ನಡೆಯುತ್ತಲೇ ಇರುತ್ತವೆ. ಹೌದು ಅಡುಗೆಗೆ ಉಪ್ಪಿಲ್ಲ, ಖಾರ ಇಲ್ಲ ಅನ್ನೋ ವಿಚಾರಕ್ಕೆ ಆಗಾಗ್ಗೆ ಸಣ್ಣಪುಟ್ಟ ಜಗಳಗಳು ನಡೆಯುತ್ತಿರುತ್ತವೆ. ಆದ್ರೆ ಎಂದಿಗೂ ಈ ಜಗಳಗಳು ಆತ್ಮಹತ್ಯೆ ಅಥವಾ ಕೊಲೆಯ ಹಂತಕ್ಕೆ ಹೋಗುವುದಿಲ್ಲ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು,…
ಪುತ್ತೂರು : ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ ಬೆಂಗಳೂರಿನ ಹೋಟೆಲ್ವೊಂದಕ್ಕೆ ಕರೆಸಿಕೊಂಡು ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದೂ ಅಲ್ಲದೆ ನಂಬಿಕೆ ದ್ರೋಹ, ವಂಚನೆ, ಶಾರೀರಿಕ ಮತ್ತು ಮಾನಸಿಕ ಪೀಡನೆ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ನೀಡಿದ ದೂರಿನಂತೆ ಪುತ್ತಿಲ ಪರಿವಾರ ಟ್ರಸ್ಟ್ನ ಸಂಸ್ಥಾಪಕ, ಬಿಜೆಪಿ ಮುಖಂಡ ಅರುಣ್ಕುಮಾರ್ ಪುತ್ತಿಲ ವಿರುದ್ಧ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯೋರ್ವರು ಅರುಣ್ ಕುಮಾರ್ ಪುತ್ತಿಲ ಅವರ ವಿರುದ್ಧ ಪುತ್ತೂರು…
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಶಂಕಿತ ಉಗ್ರನೋರ್ವನ ಬಂಧನವಾಗಿದೆ.ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಇತ್ತೀಚಿಗೆ ದೇಶದ್ರೋಹ ಆರೋಪದಡಿ ನೌಕಾನೆಲೆಯ ಗುತ್ತಿಗೆ ಆಧಾರದ ನೌಕರರಾದ ಮೂವರನ್ನು ವಶಕ್ಕೆ ಪಡೆದಿದ್ದರು. ಇದರ ಬೆನ್ನಲ್ಲೇ, ಅಧಿಕಾರಿಗಳು ಬೆಂಗಳೂರಿನಿಂದ ಸೌದಿಗೆ ಎಸ್ಕೇಪ್ ಆಗುತ್ತಿದ್ದ ಶಂಕಿತ ಉಗ್ರ ಅಜೀಜ್ ಅಹ್ಮದ್ನನ್ನು ಶುಕ್ರವಾರ ಬಂಧಿಸಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಶಂಕಿತ ಉಗ್ರನನ್ನು ಬಂಧಿಸಿದ್ದು, ಅಜೀಜ್ ಅಹ್ಮದ್ ಬಂಧಿತ ಶಂಕಿತ ಉಗ್ರ. ಹಿಜ್ಬ್…
ನೀಲಾವರ: ಸಾರ್ವಜನಿಕ ಗಣೇಶೋತ್ಸವ ಪ್ರಯುಕ್ತ ಕೆಸರು ಗದ್ದೆ ಕ್ರೀಡೋತ್ಸವ “ಕೆಸರಾಟ” ಕಾರ್ಯಕ್ರಮಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ನೀಲಾವರ ಇವರ ಆಯೋಜನೆಯೊಂದಿಗೆ 38ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಪ್ರಯುಕ್ತ ಸೆಪ್ಟೆಂಬರ್ 01ರ ಭಾನುವಾರದಂದು ಬೆಳಿಗ್ಗೆ ಕೆಸರು ಗದ್ದೆ ಕ್ರೀಡೋತ್ಸವ “ಕೆಸರಾಟ” ಕಾರ್ಯಕ್ರಮ ಏರ್ಪಡಿಸಲಾಗಿದೆ. ಸ್ಪರ್ಧೆಗಳ ವಿವರ:ಹಗ್ಗಜಗ್ಗಾಟ, ವಾಲಿಬಾಲ್, ಹಿಮ್ಮುಖ ಮುಮ್ಮುಖ ಓಟ, ಸ್ಪೂನ್ ನಲ್ಲಿ ಲಿಂಬೆ ಹಣ್ಣು ಹಿಡಿದು ಚಲನೆ, ಹೊಳೆಯಲ್ಲಿ ದೋಣಿ ಸ್ಪರ್ಧೆ, ಮೊಸರುಕುಡಿಕೆ ಸೇರಿದಂತೆ…
ಉಡುಪಿ : ಪಡುಕೆರೆ ಬೀಚ್ನಲ್ಲಿ ಯುವತಿಯೊಬ್ಬರು ಬಿಕಿನಿ ಫೋಟೋಶೂಟ್ ಮಾಡಿಸಿಕೊಳ್ಳುವ ವೇಳೆ ಪೊಲೀಸರು ತಡೆದ ಘಟನೆ ನಡೆದಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಯುವತಿ, ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದೆ. ಯುವತಿಯ ಬಿಕಿನಿ ಫೋಟೋಶೂಟ್ ಮಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಜೊತೆಗೆ ಎಚ್ಚರಿಕೆ ನೀಡುವಂತೆಯೂ ತಿಳಿಸಿದ್ದರು ಎನ್ನಲಾಗಿದೆ. ಸಂಭಾವ್ಯ ಸಮಸ್ಯೆಯ…
