ಮೇಷ: ಇತರರೊಂದಿಗೆ ಸಂತೋಷವನ್ನು ಹಂಚಿಕೊಳ್ಳಿ. ಮನೆಯ ಸದಸ್ಯರೊಬ್ಬರ ವರ್ತನೆಯಿಂದ ತೊಂದರೆಯಾಗಬಹುದು. ವೈಯಕ್ತಿಕ ಮಾರ್ಗದರ್ಶನ ನಿಮ್ಮ ಸಂಬಂಧವನ್ನು ಸುಧಾರಿಸುತ್ತದೆ.
ವೃಷಭ: ಹೂಡಿಕೆ ಲಾಭ ಮತ್ತು ಸಮೃದ್ಧಿಯನ್ನು ತರುತ್ತದೆ. ಮೊಮ್ಮಕ್ಕಳು ಅಪಾರ ಸಂತೋಷದ ಮೂಲವಾಗುತ್ತಾರೆ. ಸಂಗಾತಿಯ ಜೊತೆಗಿನ ಉತ್ತಮ ದಿನವಾಗಬಹುದು.
ಮಿಥುನ: ಹಣ ಇಲ್ಲದಿದ್ದಾಗ ಹಣದ ಮೌಲ್ಯ ಅರ್ಥ ಮಾಡಿಕೊಳ್ಳುತ್ತೀರಿ. ಸಂಜೆ ಏನಾದರೂ ವಿಶೇಷವಾದದನ್ನು ಯೋಚಿಸಿ. ಹೆಚ್ಚು ಜನರನ್ನು ಭೇಟಿಯಾದಾಗ ಅಸಮಾಧಾನವಾಗೋದು ನಿಮ್ಮ ವ್ಯಕ್ತಿತ್ವ.
ಕರ್ಕಾಟಕ: ನೀವು ಮಾಡಿದ ತಪ್ಪು ನಿಮಗೇ ಮಾನಸಿಕ ಒತ್ತಡ ತರುತ್ತದೆ. ನಿಮ್ಮಿಂದ ನಿರ್ಲಕ್ಷ್ಯವಾದದ್ದು ದುಬಾರಿ ಎನಿಸಬಹುದು. ನಿಮ್ಮ ಖ್ಯಾತಿಗೆ ಧಕ್ಕೆ ತರುವವರಿಂದ ದೂರವಿರಿ.
ಸಿಂಹ: ಮಾನಸಿಕ ಒತ್ತಡಕ್ಕೆ ಆಧ್ಯಾತ್ಮಿಕತೆ ಉತ್ತಮ ಆಯ್ಕೆ. ಸಂಗಾತಿ ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಾರೆ. ಧ್ಯಾನ ಮತ್ತು ಯೋಗದಿಂದ ಪ್ರಯೋಜನವಿದೆ.
ಕನ್ಯಾ: ಪ್ರತೀ ದಿನ ಪ್ರೀತಿಯಲ್ಲಿ ಬೀಳುವ ನಿಮ್ಮ ಗುಣವನ್ನು ಬದಲಾಯಿಸಿ. ಕೆಲಸದ ಪರಿಸರ ನಿಮ್ಮ ಒಳ್ಳೆಯದಕ್ಕೆ ಬದಲಾಗಬಹುದು. ನಿಮ್ಮ ಸಂಗಾತಿಯಿಂದ ವ್ಯತಿರಿಕ್ತ ಪ್ರತಿಕ್ರಿಯೆ ಪಡೆಯಬಹುದು.
ತುಲಾ: ಸಂತೃಪ್ತಿಯ ಜೀವನಕ್ಕೆ ಮಾನಸಿಕ ದೃಢತೆಯನ್ನು ಸುಧಾರಿಸಿ. ಮಕ್ಕಳು ಅಧ್ಯಯನದಲ್ಲಿ ನಿರಾಸಕ್ತಿ ತೋರುತ್ತಾರೆ. ಪರೀಕ್ಷೆಯ ಭಯ ಧೃತಿಗೆಡಿಸೋದು ಬೇಡ.
ವೃಶ್ಚಿಕ: ಕೋಪ ಘರ್ಷಣೆಗೆ ಕಾರಣವಾಗಬಹುದು. ಹಣದ ನಷ್ಟವಾಗುವ ಸಾಧ್ಯತೆ ಇದೆ. ಹೊಸ ಉದ್ಯಮಗಳು ಆಕರ್ಷಕವಾಗಿರುತ್ತದೆ.
ಧನಸ್ಸು: ಚೈತನ್ಯ ಹೆಚ್ಚಿಸಲು ಉತ್ತಮವಾದ ದಿನ. ನೀವು ನಿಮ್ಮ ಸಂಗಾತಿಯನ್ನು ಅಸಮಾಧಾನಪಡಿಸಬಹುದು. ಪ್ರೀತಿಯ ಸಂತೋಷವನ್ನು ಅನುಭವಿಸಬಹುದು.
ಮಕರ: ಹೆಚ್ಚು ಖರೀದಿಸುವ ಬದಲು ಈಗಾಗಲೇ ನೀವು ಹೊಂದಿರುವುದನ್ನು ಬಳಸಿ. ಸಮಸ್ಯೆಗಳನ್ನು ದೂರ ತಳ್ಳಿ. ನೀವು ನಿಮ್ಮ ಅರ್ಧಾಂಗಿಗೆ ಎಷ್ಟು ಮುಖ್ಯ ಎಂಬುವುದು ಅರಿವಾಗುತ್ತದೆ.
ಕುಂಭ: ಧಾರ್ಮಿಕ ಆಸಕ್ತಿ ಅನುಸರಿಸಲು ಉತ್ತಮ ದಿನ. ಪ್ರವಾಸ ತಾಣಗಳಿಗೆ ಭೇಟಿ ನೀಡುತ್ತೀರಿ. ನಿಮ್ಮ ವಸ್ತುಗಳ ಮೇಲೆ ಅಸಡ್ಡೆ ಮಾಡಿದಲ್ಲಿ ಕಳ್ಳತನವಾಗುವ ಸಂಭವವಿದೆ.
ಮೀನ: ಹಣದ ಪ್ರಯೋಜನ ಪಡೆಯುವ ಸಾಧ್ಯತೆ ಇದೆ. ಭಿನ್ನಾಭಿಪ್ರಾಯದಿಂದ ವೈಯಕ್ತಿಕ ಸಂಬಂಧದಲ್ಲಿ ಬಿರುಕು ಮೂಡಬಹುದು. ನಿಮ್ಕ ಕೆಲಸದಲ್ಲಿ ಆಧುನಿಕತೆ ತರಲು ಪ್ರಯತ್ನಿಸಿ.


