ಬೆಳಿಗ್ಗೆ ಏನ್ ತಿಂಡಿ ಮಾಡೋದು ಅನ್ನೋ ಪ್ರಶ್ನೆ ಪ್ರತಿಯೊಬ್ಬರ ಮನೆಯಲ್ಲಿ ಇದ್ದೇ ಇರುತ್ತದೆ. ಮನೆಯ ಮಹಿಳೆಯರಿಗಂತೂ ಪ್ರತಿನಿತ್ಯ ಏನಪ್ಪ ವೆರೈಟಿ ತಿಂಡಿ ಮಾಡಿ ಬಳಸೋದು ಅನ್ನೋ ಯೋಚನೆ ಇರುತ್ತೆ. ಇದು ಬೇರೆ ಸೆಕೆಗಾಲ. ತಂಪಾಗಿರೋದನ್ನು ಕುಡಿಯಲು, ತಿನ್ನಲು ಇಷ್ಟ ಪಡ್ತೇವೆ. ಈ ಟೈಮಲ್ಲಿ ಒಂದು ಬೆಸ್ಟ್ ಆಯ್ಕೆ ಅಂದ್ರೆ ಪಾಲಾಕ್ ಕಿಚಡಿ.
ಆರೋಗ್ಯಕ್ಕೆ ಪೂರಕವಾದ ಈ ರೆಸಿಪಿ ಮಕ್ಕಳಿಗಂತೂ ತುಂಬಾ ಒಳ್ಳೆಯದು. ಬೇಸಿಗೆ ಕಾಲದಲ್ಲಿ ಈ ರೀತಿ ಪಾಲಾಕ್ ಸೊಪ್ಪಿನ ರೆಸಿಪಿ ಮಾಡಿ ತಿನ್ನುವುದರಿಂದ ಚರ್ಮದ ಆರೋಗ್ಯ ಕೂಡಾ ಉತ್ತಮವಾಗಿರುತ್ತದೆ. ಕಣ್ಣಿಗೂ ಕೂಡಾ ಒಳ್ಳೆಯದು. ಬೇಸಿಗೆ ಕಾಲದಲ್ಲಿ ದೇಹ ಯಾವಾಗಲೂ ಹೀಟ್ ಆಗಿರುವುದರಿಂದ ಇದನ್ನು ಸೇವಿಸಿದ್ರೆ ದೇಹ ಹೈಡ್ರೇಟ್ ಆಗಿರುತ್ತದೆ.
ರೋಗ ನಿರೋಧಕ ಶಕ್ತಿ ಹೊಂದಿರುವ ಈ ಸೊಪ್ಪನ್ನು ತಿಂದರೆ ಮಲಬದ್ಧತೆಯಂತಹ ಸಮಸ್ಯೆ ಕೂಡಾ ದೂರವಾಗುತ್ತದೆ. ಹಸಿರು ತರಕಾರಿ ಯಾವಾಗಲೂ ನಮ್ಮ ದೇಹ ಮಾತ್ರವಲ್ಲದೆ ಕೂದಲಿನ ಆರೈಕೆಯನ್ನು ಕೂಡಾ ಮಾಡುತ್ತದೆ. ಒಟ್ಟಾರೆಯಾಗಿ ಬೇಸಿಗೆ ಕಾಲದಲ್ಲಿ ಪಾಲಾಕ್ ಸೊಪ್ಪಿನ ಬ್ರೇಕ್ಪಾಸ್ಟ್, ಪಲ್ಯ, ಜ್ಯೂಸ್ ಮಾಡಿ ಕುಡಿಯುವುದರಿಂದ ದೇಹಕ್ಕೆ ಅನೇಕ ರೀತಿಯ ಲಾಭಗಳಿವೆ.

