ವೈರಲ್ ಸೋಂಕು ಕಾಣಿಸಿಕೊಂಡಾಗ ಜ್ವರ, ಮೈಕೈ ನೋವು, ಗಂಟಲು ನೋವು, ಮೂಗು ಕಟ್ಟುವಿಕೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಸಾಮಾನ್ಯವಾಗಿ ಕೆಲವೇ ದಿನಗಳಲ್ಲಿ ಈ ಲಕ್ಷಣಗಳು ಕಡಿಮೆಯಾಗುತ್ತವೆ. ಆದರೆ ಜ್ವರ ಕಡಿಮೆಯಾದ ಬಳಿಕವೂ ಕೆಮ್ಮು ಮಾತ್ರ ಕೆಲವು ವಾರಗಳ ಕಾಲ ಮುಂದುವರಿಯುವುದು ಹಲವರಲ್ಲಿ ಕಂಡುಬರುತ್ತದೆ. ಸೋಂಕು ಗುಣವಾದ ನಂತರವೂ ಉಳಿಯುವ ಈ ರೀತಿಯ ಕೆಮ್ಮನ್ನು ಸಾಮಾನ್ಯವಾಗಿ ‘ಪೋಸ್ಟ್-ಇನ್ಫೆಕ್ಷಿಯಸ್ ಕಫ್’ ಎಂದು ಕರೆಯಲಾಗುತ್ತದೆ. ವೈರಸ್ ದೇಹದಿಂದ ಹೊರಹೋದ ಬಳಿಕವೂ ಗಂಟಲು…
Author: Karavali TV
ನವದೆಹಲಿ: ಸೂರ್ಯನ ಬೆಳಕು ಭೂಮಿಯ ಮೇಲಿನ ಜೀವಜಗತ್ತಿನ ಪ್ರಮುಖ ಆಧಾರ. ಸಸ್ಯಗಳ ದ್ಯುತಿಸಂಶ್ಲೇಷಣೆಯಿಂದ ಹಿಡಿದು ಭೂಮಿಯ ಉಷ್ಣತೆ ಮತ್ತು ಹವಾಮಾನ ವ್ಯವಸ್ಥೆಯವರೆಗೆ ಸೂರ್ಯನ ಪಾತ್ರ ಅತ್ಯಂತ ಮಹತ್ವದ್ದು. ಆದರೆ ಒಂದು ವೇಳೆ ಸೂರ್ಯನ ಬೆಳಕು ಹಠಾತ್ ಭೂಮಿಗೆ ಬರುವುದು ನಿಂತುಹೋದರೆ ಏನಾಗಬಹುದು? ಭೂಮಿ ತಕ್ಷಣವೇ ಕತ್ತಲಲ್ಲಿ ಮುಳುಗುತ್ತದೆಯೇ? ಅಥವಾ ಜೀವಜಗತ್ತಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಸಿಗುತ್ತದೆಯೇ? ವೈಜ್ಞಾನಿಕವಾಗಿ ನೋಡಿದರೆ, ಸೂರ್ಯನ ಬೆಳಕು ನಿಂತ ತಕ್ಷಣ ಭೂಮಿಯಲ್ಲಿ ಅದರ ಪರಿಣಾಮ ಕಾಣಿಸುವುದಿಲ್ಲ.…
ಉಡುಪಿ: ನಗರದ ಅಂಬಲಪಾಡಿಯ ಮನೆ ಒಂದರಲ್ಲಿ ನಡೆದಿದ್ದ ಭಾರೀ ಮನೆ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಉಡುಪಿ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಉತ್ತರ ಪ್ರದೇಶ ಮೂಲದ ಹೆಸರಾಂತ ‘ಬೇಡಿಯಾ ಗ್ಯಾಂಗ್’ಗೆ ಸೇರಿದ ಇಬ್ಬರು ಅಂತರ್‌ರಾಜ್ಯ ಖತರ್ನಾಕ್ ಕಳ್ಳರನ್ನು ಬಂಧಿಸಲಾಗಿದ್ದು, ಅವರಿಂದ ಒಟ್ಟು 4,50,500 ರೂಪಾಯಿ ಮೌಲ್ಯದ ನಗದು ಹಾಗೂ ವಿವಿಧ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಅಕ್ರೌಲಿ ನಿವಾಸಿಗಳಾದ ಮೊಹಮ್ಮದ್ ಜಾಫರ್ (22) ಮತ್ತು ಕದೀರ್ (32)…
ಬೆಂಗಳೂರು: ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಅಕ್ಟೋಬರ್ 3 ರಿಂದ ಅಕ್ಟೋಬರ್ 21 ರವರೆಗೆ ಒಟ್ಟು 19 ದಿನಗಳ ಕಾಲ ದಸರಾ ರಜೆಯನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ, ಈ ವರ್ಷ ಒಟ್ಟು 119 ಸಾರ್ವಜನಿಕ ಹಾಗೂ ಸಾಂದರ್ಭಿಕ ರಜೆಗಳಿದ್ದು, 245 ದಿನಗಳನ್ನು ಶಾಲಾ ಕರ್ತವ್ಯದ ದಿನಗಳನ್ನಾಗಿ ನಿಗದಿಪಡಿಸಲಾಗಿದೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಇರುವುದರಿಂದ ಅಂದಿನಿಂದಲೇ ವಿದ್ಯಾರ್ಥಿಗಳಿಗೆ ನಿತ್ಯದ…
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬಳಿ ಇರುವ ಅಪಾರ ಪ್ರಮಾಣದ ಚಿನ್ನಾಭರಣ, ನಗದು ಹಣ ಹಾಗೂ ದುಬಾರಿ ವಸ್ತುಗಳನ್ನು ವೀಡಿಯೊ ಮಾಡಿ ಪ್ರದರ್ಶಿಸುವ ಚಟುವಟಿಕೆಗಳು ಹೆಚ್ಚಾಗುತ್ತಿವೆ. ತಮ್ಮಲ್ಲಿರುವ ಸಂಪತ್ತನ್ನು ಸಾರ್ವಜನಿಕವಾಗಿ ತೋರಿಸಿಕೊಳ್ಳುವ ಈ ಟ್ರೆಂಡ್ ಇದೀಗ ಪ್ರಸಿದ್ಧ ಯೂಟ್ಯೂಬರ್ ಕುಟುಂಬವೊಂದಕ್ಕೆ ಭಾರಿ ಬೆಲೆಯಾಗಿ ಪರಿಣಮಿಸಿದೆ. ಮನೆಯಲ್ಲಿದ್ದ ಆಭರಣ ಹಾಗೂ ಹಣದ ಪ್ರತಿಯೊಂದು ವಿವರವನ್ನೂ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಮಹಿಳೆಯ ಮನೆಯಲ್ಲೇ ಇದೀಗ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು…
ಬೆಂಗಳೂರು: ಊಟ ಮಾಡಿದ ತಕ್ಷಣ ಮಲಗುವುದು, ಸ್ನಾನ ಮಾಡುವುದು ಅಥವಾ ಕಠಿಣ ವ್ಯಾಯಾಮಕ್ಕೆ ಮುಂದಾಗುವುದು ಹಲವರ ದಿನಚರಿಯಲ್ಲಿರುವ ಸಾಮಾನ್ಯ ಅಭ್ಯಾಸ. ಆದರೆ ಆಹಾರ ಸೇವಿಸಿದ ಬಳಿಕ ದೇಹಕ್ಕೆ ಜೀರ್ಣಕ್ರಿಯೆಗಾಗಿ ಸ್ವಲ್ಪ ಸಮಯ ನೀಡುವುದು ಅಗತ್ಯ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಊಟದ ನಂತರ ತಕ್ಷಣವೇ ಕೆಲವು ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಕೆಲವರಿಗೆ ಹೊಟ್ಟೆಯ ಅಸ್ವಸ್ಥತೆ ಸೇರಿದಂತೆ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆಹಾರ ಸೇವಿಸುವುದು ಮಾತ್ರವಲ್ಲದೆ, ಅದನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಸೂಕ್ತ…
ನವದೆಹಲಿ: ಮಕ್ಕಳಿಗೆ ನೆಗಡಿ, ಕೆಮ್ಮು ಅಥವಾ ಜ್ವರ ಕಾಣಿಸಿಕೊಂಡ ತಕ್ಷಣ ವೈದ್ಯರ ಸಲಹೆ ಪಡೆಯದೆ ನೇರವಾಗಿ ಕೆಮ್ಮಿನ ಸಿರಪ್ ನೀಡುವ ಪೋಷಕರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ವಿಶೇಷವಾಗಿ ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಲವು ಕೆಮ್ಮಿನ ಸಿರಪ್‌ಗಳನ್ನು ನೀಡುವುದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಔಷಧ ನಿಯಂತ್ರಣ ಪ್ರಾಧಿಕಾರ ಎಚ್ಚರಿಸಿದೆ. ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಔಷಧ ನಿಯಮಗಳು, 1945ಕ್ಕೆ ತಿದ್ದುಪಡಿ ತರಲು ಮುಂದಾಗಿದೆ.…
ಕುಂದಾಪುರ: ಕಳೆದ 18 ವರ್ಷಗಳಿಂದ ಕೋಟೇಶ್ವರದ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಕಟ್‌ಬೆಲ್ತೂರು ನಿವಾಸಿ ರಾಘವೇಂದ್ರ ಜೋಗಿ (48) ಅವರು ಗುರುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಟ್‌ಬೆಲ್ತೂರಿನಲ್ಲಿ ಹೆಂಡತಿ ಹಾಗೂ ಮಗಳೊಂದಿಗೆ ವಾಸಿಸುತ್ತಿದ್ದ ರಾಘವೇಂದ್ರ ಜೋಗಿಯವರು ದಿನಾಂಕ 24/09/2026 ರಂದು ಮರಕ್ಕೆ ನೇಣು ಬಿಗಿದುಕೊಂಡಿದ್ದಾರೆ. ಮಧ್ಯಾಹ್ನ 12:30 ರ ಸುಮಾರಿಗೆ ಘಟನೆ ಗಮನಕ್ಕೆ ಬಂದ ತಕ್ಷಣ, ಕುಟುಂಬಸ್ಥರು ಹಾಗೂ ಸ್ಥಳೀಯರು ಅವರನ್ನು ಕುಂದಾಪುರದ ಆದರ್ಶ…
ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ, ಖ್ಯಾತ ಗಾಯಕಿ ಹಾಗೂ ಭರತನಾಟ್ಯ ಕಲಾವಿದೆ ಶಿವಶ್ರೀ ಸ್ಕಂದಪ್ರಸಾದ್ ಅವರು ರೈಲು ಪ್ರಯಾಣದ ವೇಳೆ ತಮಗಾದ ಕಹಿ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ನಾಗರಿಕ ಪ್ರಜ್ಞೆ ಹಾಗೂ ಇತರ ಪ್ರಯಾಣಿಕರ ನೆಮ್ಮದಿಗೆ ಗೌರವ ನೀಡುವ ಅಗತ್ಯದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿವಶ್ರೀ ಅವರ ಪ್ರಕಾರ, ರೈಲಿನ 56 ಆಸನಗಳ ಬೋಗಿಯಲ್ಲಿ ಸುಮಾರು…
ಉಡುಪಿ (ಸೆ.25): ಯುಎಇಯ ಶಾರ್ಜಾದಲ್ಲಿ ಬರ್ಬರವಾಗಿ ಕೊಲೆಯಾಗಿದ್ದ ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಅಲ್ವಿನ್ ಪ್ರಕಾಶ್ ಕುಂದರ್ ಅವರ ಮೃತದೇಹ ಕೊನೆಗೂ ಉಡುಪಿಗೆ ತಲುಪಿದೆ.ಕಳೆದ ಎರಡು ತಿಂಗಳ ಹಿಂದೆ ನಡೆದಿದ್ದ ಈ ದಾರುಣ ಹತ್ಯೆಯ ಬಳಿಕ, ಇಂದು ಮಂಗಳೂರು ವಿಮಾನ ನಿಲ್ದಾಣದ ಮೂಲಕ ಮೃತದೇಹವನ್ನು ಕುಂದಾಪುರಕ್ಕೆ ತರಲಾಗಿದ್ದು, ಕಿರಿಯ ಸಹೋದರನ ಶವ ಕಂಡು ಅಣ್ಣ ಸೇರಿದಂತೆ ಇಡೀ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಏನಿದು ಭೀಕರ ಪ್ರಕರಣ? ಹಲವು ವರ್ಷಗಳಿಂದ ಶಾರ್ಜಾ ವಿಮಾನ…
