ಕಿವಿಯೊಳಗೆ ಮೇಣ ಜಮೆಯಾಗುವುದು ಸಹಜ ಪ್ರಕ್ರಿಯೆ. ಆದರೆ ಕಿವಿಯನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಇಯರ್‌ಬಡ್ಸ್‌ಗಳನ್ನು ಬಳಸುವ ಅಭ್ಯಾಸ ಕೆಲವರಲ್ಲಿದೆ. ಕಿವಿಯ ಮೇಣವನ್ನು ಕೊಳೆ ಎಂದು ಭಾವಿಸಿ ಪದೇಪದೆ ತೆಗೆಯಲು ಪ್ರಯತ್ನಿಸುವುದು ಅಪಾಯಕಾರಿ. ಇದರಿಂದ ಕಿವಿಯ ಒಳಭಾಗಕ್ಕೆ ಗಾಯವಾಗುವ ಜತೆಗೆ ಕೇಳುವಿಕೆಯ ಮೇಲೂ ಪರಿಣಾಮ ಬೀರಬಹುದು. ವಾಸ್ತವದಲ್ಲಿ ಕಿವಿಯ ಮೇಣವು ಕಿವಿಯನ್ನು ಧೂಳು, ಕೊಳಕು ಮತ್ತು ಸಣ್ಣ ಕಣಗಳಿಂದ ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಿವಿಯ ಮೇಣದಿಂದ ಏನು ಪ್ರಯೋಜನ? ಕಿವಿಯಲ್ಲಿ ಉತ್ಪತ್ತಿಯಾಗುವ…
Author: Karavali TV
ಬೆಳಗ್ಗೆ ಎದ್ದಾಗ ಕೀಲುಗಳಲ್ಲಿ ಬಿಗಿತ, ನಡೆಯುವಾಗ ನೋವು, ಮೊಣಕಾಲುಗಳಲ್ಲಿ ಊತ ಕಾಣಿಸುತ್ತಿದೆಯೇ? ಇವು ಸಂಧಿವಾತದ ಲಕ್ಷಣಗಳಾಗಿರಬಹುದು. ಸಾಮಾನ್ಯ ಕೀಲುನೋವು ಮತ್ತು ಆರ್ಥ್ರೈಟಿಸ್ ನಡುವಿನ ವ್ಯತ್ಯಾಸ ತಿಳಿದುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಕೀಲುನೋವಿನ ಸಮಸ್ಯೆ ಹಲವರನ್ನು ಕಾಡುತ್ತಿದೆ. ದೈಹಿಕ ಆಯಾಸ, ಅತಿಯಾದ ಕೆಲಸ ಅಥವಾ ಗಾಯದಿಂದ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು. ಆದರೆ ನೋವು ಪದೇಪದೆ ಕಾಣಿಸಿಕೊಂಡರೆ ಅಥವಾ ದೀರ್ಘಕಾಲ ಮುಂದುವರಿದರೆ ಅದು ಸಂಧಿವಾತದ ಲಕ್ಷಣವೂ ಆಗಿರಬಹುದು. ಸಂಧಿವಾತ…
ನವರಾತ್ರಿ ಹಬ್ಬದ ಮೂರನೇ ದಿನ ದೇವಿಯ ವಿಶೇಷ ರೂಪವನ್ನು ಆರಾಧಿಸಲಾಗುತ್ತದೆ. ಈ ದಿನದಂದು ದುರ್ಗಾದೇವಿಯ ಚಂದ್ರಘಂಟಾ ರೂಪಕ್ಕೆ ವಿಶೇಷ ಪೂಜೆ ಸಲ್ಲಿಸುವುದು ಸಂಪ್ರದಾಯವಾಗಿದೆ. ತಲೆಯ ಮೇಲೆ ಅರ್ಧಚಂದ್ರಾಕೃತಿಯ ಗಂಟೆಯನ್ನು ಧರಿಸಿರುವುದರಿಂದ ದೇವಿಗೆ ಚಂದ್ರಘಂಟಾ ಎಂಬ ಹೆಸರು ಬಂದಿದೆ ಎಂಬ ನಂಬಿಕೆಯಿದೆ. ಧೈರ್ಯ ಮತ್ತು ಶಕ್ತಿಯ ಪ್ರತೀಕ ದೇವಿ ಚಂದ್ರಘಂಟಾ ದೇವಿ ಚಂದ್ರಘಂಟಾ ಧೈರ್ಯ, ಶೌರ್ಯ ಹಾಗೂ ಶಾಂತಿಯ ಪ್ರತೀಕವಾಗಿದ್ದಾಳೆ. ದುಷ್ಟ ಶಕ್ತಿಗಳಿಂದ ಭಕ್ತರನ್ನು ರಕ್ಷಿಸಿ, ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ನಿವಾರಿಸುತ್ತಾಳೆ…
ಮೇಷ ಕುಟುಂಬದಲ್ಲಿ ಸಣ್ಣ ಭಿನ್ನಾಭಿಪ್ರಾಯಗಳು ಉಂಟಾಗಬಹುದು; ತಾಳ್ಮೆಯಿಂದ ವರ್ತಿಸಿ, ಪ್ರಯಾಣದಲ್ಲಿ ಎಚ್ಚರಿಕೆ ವಹಿಸಿ. ಹಣಕಾಸಿನ ಒತ್ತಡ ಎದುರಾಗಬಹುದು, ಬಂಧುಮಿತ್ರರ ನೆರವು ಸಿಗಲು ವಿಳಂಬವಾಗುವ ಸಾಧ್ಯತೆ ಇದೆ. ವೃಷಭ ಕೈಗೆತ್ತಿಕೊಂಡ ಕೆಲಸಗಳಲ್ಲಿ ಯಶಸ್ಸು, ಕುಟುಂಬದಲ್ಲಿ ನೆಮ್ಮದಿ ಮತ್ತು ಸಮಾಜದಲ್ಲಿ ಗೌರವ ಹೆಚ್ಚಾಗುವ ಸಾಧ್ಯತೆ ಇದೆ. ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಿದರೆ ಅನಿರೀಕ್ಷಿತ ಹಣಕಾಸಿನ ಲಾಭ ದೊರೆಯಬಹುದು. ಮಿಥುನ ನಿಮ್ಮ ಪ್ರಯತ್ನದಿಂದ ಬಾಕಿ ಕೆಲಸಗಳು ಪೂರ್ಣಗೊಳ್ಳಲಿದ್ದು, ವೃತ್ತಿಯಲ್ಲಿ ಗೌರವ ಮತ್ತು ಮನ್ನಣೆ ಹೆಚ್ಚಾಗಬಹುದು. ಕುಟುಂಬದಲ್ಲಿ ಸಂತೋಷವಿದ್ದರೂ…
ಬೆಂಗಳೂರು (ಅಕ್ಟೋಬರ್ 12): ಪ್ರಮುಖ ರಾಜ್ಯಪಾಲರ ಹುದ್ದೆಗಳ ಮರುಹಂಚಿಕೆಯ ಭಾಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು 6 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಇದರಡಿ ಪ್ರಸ್ತುತ ಕೇರಳದ ರಾಜ್ಯಪಾಲರಾಗಿದ್ದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ತಮಿಳುನಾಡಿಗೆ ವರ್ಗಾಯಿಸಲಾಗಿದ್ದು, ಓಂ ಪ್ರಕಾಶ್ ಮಾಥುರ್ ಅವರನ್ನು ಕೇರಳದ ನೂತನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಇನ್ನು ಕರ್ನಾಟಕದ ನೂತನ ರಾಜ್ಯಪಾಲರನ್ನಾಗಿ ಮಾಜಿ ಸಂಸದೆ ಡಾ. ಸುಧಾ ಯಾದವ್ ಅವರನ್ನು ನೇಮಕ…
ಕುಂದಾಪುರ : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಕಳೆದ 10 ವರ್ಷಗಳ ಅವಧಿಯಲ್ಲಿ ನಡೆಸಿದ ಸಮಗ್ರ ಕಾರ್ಯಕ್ಷಮತೆ ಮೌಲ್ಯಮಾಪನದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ಪೊಲೀಸ್ ಉಪವಿಭಾಗದ ಬೈಂದೂರು ವೃತ್ತಕ್ಕೆ ಒಳಪಡುವ ಗಂಗೊಳ್ಳಿ ಪೊಲೀಸ್ ಠಾಣೆ ರಾಜ್ಯದ ಅತ್ಯುತ್ತಮ 10 ಪೊಲೀಸ್ ಠಾಣೆಗಳಲ್ಲಿ 7ನೇ ಸ್ಥಾನ ಪಡೆದು ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಾಧನೆಯು ಜಿಲ್ಲಾ ಪೊಲೀಸ್ ಇಲಾಖೆಗೆ ಮತ್ತು ಸಾರ್ವಜನಿಕರಿಗೆ ಅಪಾರ ಹೆಮ್ಮೆ ತಂದಿದೆ. 14 ಮಾನದಂಡಗಳ ಆಧಾರದ ಮೇಲೆ ಮೌಲ್ಯಮಾಪನ…
ಬೆಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಕೆಪಿಎಸ್‌ಸಿ (KPSC) ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆಗೆ ಹೈಕೋರ್ಟ್ 5 ದಿನಗಳ ಕಾಲ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ತನ್ನ 12 ದಿನದ ಮಗುವಿನ ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೀದರ್‌ಗೆ ತೆರಳಲು ಕೋರಿ ಕನ್ನಾಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ, ಅಕ್ಟೋಬರ್ 15 ರಿಂದ 20 ರವರೆಗೆ ಮಾನವೀಯತೆಯ…
ಕುಂದಾಪುರ: ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MITK) ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ‘MITK AI VISION 24H’ 24-ಗಂಟೆಗಳ ರಾಷ್ಟ್ರಮಟ್ಟದ ಹ್ಯಾಕಥಾನ್‌ನ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದ ಆರಂಭದಲ್ಲಿ ಕಾಲೇಜಿನ ಸಿಬ್ಬಂದಿ ಹಾಗೂ ಗಣ್ಯರನ್ನು ಗೌರವಪೂರ್ವಕವಾಗಿ ಸ್ವಾಗತಿಸಲಾಯಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬೆಂಗಳೂರಿನ ಕಾಂವಾಲ್ಟ್ ಸಂಸ್ಥೆಯ ಡಾಟಾ ಇವಾಂಜೆಲಿಸ್ಟ್ ಪ್ರಶಾಂತ್ ಜಯರಾಮ್ ತಮ್ಮ ಅನಿಸಿಕೆ ವ್ಯಕ್ತಪಡಿಸಿ, “24 ಗಂಟೆಗಳ ನಿರಂತರ ಪರಿಶ್ರಮದಲ್ಲಿ ಸ್ಪರ್ಧಿಗಳು…
ಮಹಾತೋಬಾರ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನಡೆಯುವ ಲಕ್ಷದೀಪೋತ್ಸವದ ಆಮಂತ್ರಣ ಪತ್ರಿಕೆಯನ್ನುದೇವಳದ ತಂತ್ರಿಗಳಾದ ಪುತ್ತೂರು ಹಯವದನ ತಂತ್ರಿ ಹಾಗು ಪುತ್ತೂರು ವಾದಿರಾಜ ತಂತ್ರಿಯವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು, ಸದಸ್ಯರಾದ ಯಶೋಧರ್ ಸಾಲ್ಯಾನ್, ರಾಜ ಎ ಸೇರಿಗಾರ, ವಾದಿರಾಜ ಸಾಲ್ಯಾನ್, ಪವಿತ್ರಪಾಣಿ ಜನಾರ್ದನ್ ಕೊಡವೂರು, ದೇವಳದ ಉಮೇಶ್ ರಾವ್, ವಾಸುದೇವ ಉಪಾಧ್ಯ, ಪೂರ್ಣಿಮಾ ಜನಾರ್ದನ್ ಉಪಸ್ಥಿತರಿದ್ದರು.
ಉಡುಪಿ: ಶಕ್ತಿಯ ಆರಾಧನೆಯ ಶರನ್ನವರಾತ್ರಿ ಆರಂಭವಾಗುತ್ತಿದ್ದಂತೆ ಉಡುಪಿ ಜಿಲ್ಲೆಯಾದ್ಯಂತ ದೇವಿ ಕ್ಷೇತ್ರಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ. ದೇವಾಲಯಗಳು ವಿಶೇಷ ಅಲಂಕಾರಗಳಿಂದ ಕಂಗೊಳಿಸುತ್ತಿದ್ದು, ದೇವಿಯ ದರ್ಶನ ಪಡೆಯಲು ಪ್ರತಿದಿನ ನೂರಾರು ಭಕ್ತರು ಆಗಮಿಸುತ್ತಿದ್ದಾರೆ. ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನವರಾತ್ರಿ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿವೆ. ಜಿಲ್ಲೆಯ ಪ್ರಮುಖ ದೇವಾಲಯಗಳಿಗೆ ಕರ್ನಾಟಕದ ವಿವಿಧ ಜಿಲ್ಲೆಗಳು ಸೇರಿದಂತೆ ಹೊರರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದಾರೆ. ಉಡುಪಿ ನಗರ ವ್ಯಾಪ್ತಿಯ ಹಲವು…
