Author: Karavali TV

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಐಷಾರಾಮಿ ಐರಾವತ ಕ್ಲಬ್ ಕ್ಲಾಸ್ ಬಸ್‌ಗಳ ಮೇಲೆ ಕಾಣಿಸುವ, ಸ್ಟ್ರೋಲರ್‌ನಲ್ಲಿ ಮಲಗಿರುವ ಪುಟ್ಟ ಮಗುವಿನ ಚಿತ್ರವನ್ನು ನೀವು ಗಮನಿಸಿರಬಹುದು. ಸರಳವಾದ ಈ ಚಿತ್ರ ದಶಕಗಳಿಂದ ಪ್ರಯಾಣಿಕರ ಗಮನ ಸೆಳೆಯುತ್ತಿದ್ದು, ಅದರಲ್ಲಿರುವ ಮಗು ಯಾರು ಎಂಬ ಕುತೂಹಲ ಇಂದಿಗೂ ಮುಂದುವರಿದಿದೆ. ಈ ಜನಪ್ರಿಯ ಜಾಹೀರಾತಿನ ಹಿಂದಿರುವ ಕಥೆ ಇದೀಗ ಮತ್ತೆ ಚರ್ಚೆಗೆ ಬಂದಿದೆ. ಒಂದು ಪುಟ್ಟ ಮಗು, ಸ್ಟ್ರೋಲರ್ ಮತ್ತು ಸರಳವಾದ…

Read More

ಉಡುಪಿ: ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿರುವ ಹೈಕೋರ್ಟ್ ಪೀಠವನ್ನು ಉಡುಪಿಯಲ್ಲಿಯೇ ಸ್ಥಾಪಿಸಬೇಕೆಂದು ಆಗ್ರಹಿಸಿ, ಉಡುಪಿ ಜಿಲ್ಲಾ ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ವತಿಯಿಂದ ಅಕ್ಟೋಬರ್ 17ರಂದು ಬೆಳಿಗ್ಗೆ 10:30ಕ್ಕೆ ಬ್ರಹ್ಮಾವರದ ಬಂಟರ ಭವನದಲ್ಲಿ ತಾಲೂಕು ಮಟ್ಟದ ಬೃಹತ್ ಹಕ್ಕೊತ್ತಾಯ ಸಭೆಯನ್ನು ಆಯೋಜಿಸಲಾಗಿದೆ ಎಂದು ಸಮಿತಿಯ ಸಂಚಾಲಕ ಹಾಗೂ ವಕೀಲ ಪ್ರೇಮ್ ಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ. ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಭಾಗದಲ್ಲಿ ಹೈಕೋರ್ಟ್ ಪೀಠ…

Read More

ನವದೆಹಲಿ: ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್​ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ಭಾರತೀಯ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದ ಬೆನ್ನಲ್ಲೇ, ಸುಪ್ರೀಂ ಕೋರ್ಟ್ ಆವರಣದಲ್ಲಿ ರಾಜಕೀಯ ಮೆರವಣಿಗೆ ಹಾಗೂ ಪ್ರತಿಭಟನೆ ನಡೆಸಿದ್ದಕ್ಕಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ‘ಇಂಡಿ’ (INDIA) ಒಕ್ಕೂಟದ ನಾಯಕರ ವಿರುದ್ಧ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅರ್ಜಿಯ ವಿಚಾರಣೆ ಆರಂಭವಾಗುತ್ತಿದ್ದಂತೆ…

Read More

ಮೊಬೈಲ್ ಬಳಕೆದಾರರಿಗೆ ಮಹತ್ವದ ಬದಲಾವಣೆಯೊಂದು ಜಾರಿಗೆ ಬರಲಿದೆ. 2026ರ ನವೆಂಬರ್ 1ರಿಂದ ಮೊಬೈಲ್ ಕರೆ ಸ್ವೀಕರಿಸುವಾಗ ಕರೆ ಮಾಡುವವರ ಫೋನ್ ಸಂಖ್ಯೆಯ ಜೊತೆಗೆ ಅವರ ಹೆಸರನ್ನೂ ಪ್ರದರ್ಶಿಸುವ ಕಾಲಿಂಗ್ ನೇಮ್ ಪ್ರೆಸೆಂಟೇಶನ್ (CNAP) ಸೇವೆಯನ್ನು ಜಾರಿಗೊಳಿಸಲು ದೂರಸಂಪರ್ಕ ಇಲಾಖೆ (DoT) ಸೂಚಿಸಿದೆ. ಈ ವ್ಯವಸ್ಥೆಯಿಂದ ಅಪರಿಚಿತ ಕರೆಗಳನ್ನು ಗುರುತಿಸಲು ಹಾಗೂ ಸ್ಪ್ಯಾಮ್ ಮತ್ತು ವಂಚನೆಯ ಕರೆಗಳ ಬಗ್ಗೆ ಎಚ್ಚರಿಕೆ ವಹಿಸಲು ಬಳಕೆದಾರರಿಗೆ ಸಹಾಯವಾಗುವ ನಿರೀಕ್ಷೆಯಿದೆ. ಕರೆ ಬಂದಾಗ ಸಂಖ್ಯೆ ಮತ್ತು…

Read More

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಕುಳಿತಾಗ, ನಿಂತಾಗ, ಪ್ರಯಾಣಿಸುವಾಗ ಮಾತ್ರವಲ್ಲದೆ ಊಟ ಮಾಡುವ ಸಂದರ್ಭದಲ್ಲಿಯೂ ಮೊಬೈಲ್ ನೋಡುವ ಅಭ್ಯಾಸ ಹಲವರಲ್ಲಿದೆ. ಕೆಲವರು ಮೊಬೈಲ್‌ನಲ್ಲಿ ವಿಡಿಯೋಗಳನ್ನು ನೋಡುತ್ತಾ, ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರಾಲ್ ಮಾಡುತ್ತಾ ಊಟ ಮಾಡುತ್ತಾರೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಈ ಅಭ್ಯಾಸ ಸಾಮಾನ್ಯವಾಗುತ್ತಿದೆ. ಆದರೆ ಊಟ ಮಾಡುವಾಗ ಮೊಬೈಲ್ ಬಳಸುವುದು ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದನ್ನು ತಿಳಿದುಕೊಳ್ಳುವುದು ಬಹಳ…

Read More

ನವರಾತ್ರಿ ಹಬ್ಬದ ಐದನೇ ದಿನ ಸ್ಕಂದಮಾತೆಯ ಆರಾಧನೆಗೆ ವಿಶೇಷ ಮಹತ್ವವಿದೆ. ದುರ್ಗಾದೇವಿಯ ಐದನೇ ಸ್ವರೂಪವಾದ ಸ್ಕಂದಮಾತೆಯು ತಾಯ್ತನ, ಪ್ರೀತಿ, ಕರುಣೆ ಮತ್ತು ಮಮತೆಯ ಸಂಕೇತವಾಗಿದ್ದಾಳೆ. ಭಕ್ತರು ಈ ದಿನ ಭಕ್ತಿಶ್ರದ್ಧೆಯಿಂದ ದೇವಿಯನ್ನು ಪೂಜಿಸಿ, ಸುಖ, ಶಾಂತಿ, ಸಮೃದ್ಧಿ ಹಾಗೂ ಕುಟುಂಬದ ಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾರೆ. ಸ್ಕಂದಮಾತೆಯ ಸ್ವರೂಪ ಮತ್ತು ಪೌರಾಣಿಕ ಹಿನ್ನೆಲೆ ಪೌರಾಣಿಕ ನಂಬಿಕೆಗಳ ಪ್ರಕಾರ, ಸ್ಕಂದಮಾತೆಯು ಶಿವ ಮತ್ತು ಪಾರ್ವತಿಯ ಪುತ್ರನಾದ ಸುಬ್ರಹ್ಮಣ್ಯ ಸ್ವಾಮಿಯ (ಸ್ಕಂದನ) ತಾಯಿ. ಸ್ಕಂದನ ತಾಯಿಯಾಗಿರುವುದರಿಂದ…

Read More

ಬ್ರಹ್ಮಾವರ: ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ ಕಂಟೈನರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ರಸ್ತೆ ಬದಿಯಲ್ಲಿದ್ದ ಕಾರಿಗೆ ಡಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಉಪ್ಪಿನಕೋಟೆಯಲ್ಲಿ ಸಂಭವಿಸಿದೆ. ಬುಧವಾರ ಬೆಳಗ್ಗಿನ ಜಾವ ಸುಮಾರು 5:30 ಗಂಟೆಗೆ ಈ ಅಪಘಾತ ನಡೆದಿದೆ.ಅಜಯನ್ ಎಂಬುವವರು ಕಂಟೈನರ್‌ ಲಾರಿಯನ್ನು ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದರು. ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾಮದ ಉಪ್ಪಿನಕೋಟೆಯ ಶೆಟ್ಟಿ ಮಲ್ಟಿ…

Read More

ಮೇಷ ಶುಭಕಾರ್ಯಗಳು ಯಶಸ್ವಿಯಾಗಿ ನೆರವೇರಲಿದ್ದು, ಬಂಧುಮಿತ್ರರೊಂದಿಗೆ ಸಂತೋಷದ ಸಮಯ ಕಳೆಯುವಿರಿ. ಆರ್ಥಿಕ ಲಾಭ, ಪ್ರಯಾಣದ ಅನುಕೂಲ ಮತ್ತು ಸಮಾಜದಲ್ಲಿ ಗೌರವ ಹೆಚ್ಚಾಗುವ ಸಾಧ್ಯತೆಯಿದೆ. ವೃಷಭ ಕಲೆ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಸಿಗಲಿದ್ದು, ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದೆ. ಕುಟುಂಬದಲ್ಲಿ ಸಂತೋಷ ನೆಲೆಸಲಿದ್ದು, ಹೊಸ ವಸ್ತುಗಳು ಮತ್ತು ಆಭರಣ ಖರೀದಿಸುವ ಯೋಗವಿದೆ. ಮಿಥುನ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸಿ, ಅನಗತ್ಯ ಖರ್ಚು ಮತ್ತು ಅಪಾಯಕಾರಿ ವ್ಯವಹಾರಗಳಿಂದ ದೂರವಿರಿ. ಉದ್ಯೋಗ ಹಾಗೂ…

Read More

ಮುಂಬೈ:ಎನ್‌ಎಂಸಿ ಹೆಲ್ತ್‌ಕೇರ್ (NMC Healthcare) ಸಂಸ್ಥಾಪಕ ಹಾಗೂ ಭಾರತೀಯ ಮೂಲದ ಖ್ಯಾತ ಉದ್ಯಮಿ ಬಿ.ಆರ್. ಶೆಟ್ಟಿ (BR Shetty) ಅವರು ಬಾಂಬೆ ಹೈಕೋರ್ಟ್‌ನಲ್ಲಿ ಬ್ಯಾಂಕ್ ಆಫ್ ಬರೋಡಾ (Bank of Baroda) ಸೇರಿದಂತೆ ಹಲವರ ವಿರುದ್ಧ ಬರೋಬ್ಬರಿ 15 ಬಿಲಿಯನ್ ಡಾಲರ್ ಅಂದರೆ ಸುಮಾರು 1.44 ಲಕ್ಷ ಕೋಟಿ ರೂ. ಮೊರೆ ಮೊಕದ್ದಮೆ ಹೂಡಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಷೇರುಪೇಟೆಯಲ್ಲಿ ಬ್ಯಾಂಕ್ ಆಫ್ ಬರೋಡಾ ಷೇರು ಮೌಲ್ಯವು ಇಂದಿನ ವಹಿವಾಟಿನಲ್ಲಿ…

Read More

ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ ಸೇತುವೆ ಬಳಿ ನಡೆದ ದುರ್ಘಟನೆಯೊಂದರಲ್ಲಿ, ಕಣಜಾರು ಗ್ರಾಮದ ಕಡೆಬರ್ಕೆ ನಿವಾಸಿ ಸುರೇಶ್ ಶೆಟ್ಟಿ (51) ಎಂಬುವವರ ಮೃತದೇಹ ಬುಧವಾರ ನದಿಯಲ್ಲಿ ಪತ್ತೆಯಾಗಿದೆ. ನದಿಯ ದಡದಲ್ಲಿ ಮೃತದೇಹವು ಕವುಚಿ ಬಿದ್ದ ಸ್ಥಿತಿಯಲ್ಲಿ ಕಂಡುಬಂದಿದ್ದು, ಸೇತುವೆಯ ಮೇಲಿಂದ ಹಾರಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಸಂಬಂಧಿಕರು ಮೃತದೇಹವನ್ನು ಪರಿಶೀಲಿಸಿ ಗುರುತು…

Read More