Author: Karavali TV

ಬೆಂಗಳೂರು: ಮದ್ಯದ ಬಾಟಲಿಗಳ ಮೇಲೆ ಆರೋಗ್ಯ ಎಚ್ಚರಿಕೆ ನೀಡುವ ಮಾದರಿಯಲ್ಲೇ ಇನ್ಮುಂದೆ ಉಪ್ಪಿನ ಪ್ಯಾಕೆಟ್‌ಗಳ ಮೇಲೂ ಎಚ್ಚರಿಕೆ ಸ್ಟಿಕ್ಕರ್ ಅಳವಡಿಸುವ ಕುರಿತು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ರಾಜ್ಯದಲ್ಲಿ ಉಪ್ಪು ಮತ್ತು ಸಕ್ಕರೆಯ ಅತಿಯಾದ ಬಳಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಆರೋಗ್ಯ ಇಲಾಖೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಉಪ್ಪು ಹಾಗೂ ಸಕ್ಕರೆಯ ಮಿತಿಮೀರಿದ ಸೇವನೆಯಿಂದ ಜನರ ಆರೋಗ್ಯದ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ…

Read More

ಬ್ರಹ್ಮಾವರ: ಮೋಟಾರ್ ಸೈಕಲ್ ಮಾರಾಟದ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ವೈಮನಸ್ಸಿನ ಹಿನ್ನೆಲೆಯಲ್ಲಿ ಯುವಕನೋರ್ವನ ಮೇಲೆ ನಾಲ್ವರ ತಂಡ ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿದ ಘಟನೆ ಸೂರೆಬೆಟ್ಟು ಶಾಲೆಯ ಸಮೀಪ ನಡೆದಿದೆ. ಹಲ್ಲೆಗೊಳಗಾದ ಹೇರೂರು ಗ್ರಾಮದ ನಿವಾಸಿ ರಕ್ಷಿತ್ ನೀಡಿದ ದೂರಿನನ್ವಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರ ರಕ್ಷಿತ್ ಹಾಗೂ ಅವರ ನೆರೆಮನೆಯ ಸುಹಾನ್ ಪೂಜಾರಿ ನಡುವೆ ಬೈಕ್ ಮಾರಾಟದ ವಿಚಾರದಲ್ಲಿ ಆಗಾಗ್ಗೆ ಮಾತಿನ ಚಕಾಮಕಿ ನಡೆಯುತ್ತಿತ್ತು. ದಿನಾಂಕ…

Read More

ನವದೆಹಲಿ: ನವರಾತ್ರಿ ಹಬ್ಬದ ಸಂದರ್ಭದಲ್ಲಿ ಸಂಸತ್ತಿನ ವಿಶೇಷ ಅಧಿವೇಶನ ಕರೆಯುವ ಸಾಧ್ಯತೆ ಇದೀಗ ರಾಷ್ಟ್ರ ರಾಜಧಾನಿಯಲ್ಲಿ ಚರ್ಚೆಗೆ ಬಂದಿದೆ. ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ಜಾರಿ ಮತ್ತು ಕ್ಷೇತ್ರ ಪುನರ್‌ವಿಂಗಡಣೆಗೆ ಸಂಬಂಧಿಸಿದ ವಿಚಾರಗಳನ್ನು ಮುಂದಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಅಕ್ಟೋಬರ್‌ನಲ್ಲಿ ವಿಶೇಷ ಅಧಿವೇಶನ ನಡೆಸುವ ಆಯ್ಕೆಯನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದರೆ ವಿಶೇಷ ಅಧಿವೇಶನದ ದಿನಾಂಕ, ಅವಧಿ ಹಾಗೂ ಈ ಸಂದರ್ಭದಲ್ಲಿ ಕೈಗೊಳ್ಳಲಿರುವ ಶಾಸನಾತ್ಮಕ…

Read More

ಬೆಂಗಳೂರು: ದೇಶಾದ್ಯಂತ ಬ್ಯಾಂಕ್ ಗ್ರಾಹಕರಿಗೆ ಪ್ರಮುಖ ಸೂಚನೆಯೊಂದಿದ್ದು, ಈ ವಾರಾಂತ್ಯದಿಂದ ಸತತ ಐದು ದಿನಗಳ ಕಾಲ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ. ಬ್ಯಾಂಕ್ ಉದ್ಯೋಗಿಗಳ ಮುಷ್ಕರ ಹಾಗೂ ಸಾಪ್ತಾಹಿಕ ರಜೆಗಳ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 26 ರಿಂದ ಸೆಪ್ಟೆಂಬರ್ 30 ರವರೆಗೆ ಬ್ಯಾಂಕುಗಳು ಬಾಗಿಲು ಮುಚ್ಚಲಿವೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ಉದ್ಯೋಗಿ ಸಂಘಟನೆಗಳು ಸೆಪ್ಟೆಂಬರ್ 28 ರಿಂದ 30 ರವರೆಗೆ ಮೂರು ದಿನಗಳ ಮುಷ್ಕರಕ್ಕೆ ಕರೆ ನೀಡಿವೆ. ಇದಕ್ಕೂ…

Read More

ಸಿಗರೇಟ್ ಸೇದುವ ಅಭ್ಯಾಸವನ್ನು ಬಿಡಬೇಕು ಎಂದುಕೊಂಡರೂ ಪದೇಪದೇ ಅದೇ ಚಟಕ್ಕೆ ಒಳಗಾಗುತ್ತಿದ್ದೀರಾ ? ಹಾಗಿದ್ದರೆ ಸಿಗರೇಟ್ ಸೇದಬೇಕು ಎಂಬ ತೀವ್ರ ಬಯಕೆ ಬಂದಾಗ ‘4D’ ವಿಧಾನವನ್ನು ಅನುಸರಿಸುವುದು ಸಹಾಯವಾಗಬಹುದು. ಈ ಸರಳ ವಿಧಾನವು ಧೂಮಪಾನದ ಬಯಕೆಯನ್ನು ಕೆಲಕಾಲ ಮುಂದೂಡಲು ಮತ್ತು ಗಮನವನ್ನು ಬೇರೆಡೆಗೆ ಹರಿಸಲು ನೆರವಾಗುತ್ತದೆ. ಸಿಗರೇಟ್ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಿದ್ದರೂ, ದೀರ್ಘಕಾಲದ ಅಭ್ಯಾಸದಿಂದ ಅದನ್ನು ತ್ಯಜಿಸುವುದು ಹಲವರಿಗೆ ಸವಾಲಾಗುತ್ತದೆ. ಧೂಮಪಾನ ತ್ಯಜಿಸಲು ನಿರ್ಧರಿಸುವವರು ಮೊದಲಿಗೆ ಒಂದು ದಿನಾಂಕವನ್ನು ನಿಗದಿಪಡಿಸಿಕೊಂಡು,…

Read More

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಈ ಬಾರಿ ಜಾನಪದ ಕ್ರೀಡೆ ಕಂಬಳ ಆಯೋಜಿಸಲು ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಸಾತಗಳ್ಳಿ ಹೊರವರ್ತುಲ ರಸ್ತೆಯ ಪ್ರಾದೇಶಿಕ ಕೇಂದ್ರದ ಸಮೀಪ ಸುಮಾರು 25 ಎಕರೆ ಪ್ರದೇಶದಲ್ಲಿ ಅ.18 ಮತ್ತು 19ರಂದು ಜೋಡುಕರೆ ಕಂಬಳ ನಡೆಯಲಿದೆ. ಬೆಂಗಳೂರು ಅರಮನೆ ಮೈದಾನದಲ್ಲಿ 2023ರಲ್ಲಿ ಕಂಬಳ ಯಶಸ್ವಿಯಾಗಿ ನಡೆದ ಹಿನ್ನೆಲೆಯಲ್ಲಿ ಮೈಸೂರು ದಸರಾ ಮಹೋತ್ಸವದಲ್ಲೂ ಕಂಬಳ ಆಯೋಜಿಸುವ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಘೋಷಿಸಿದ್ದರು. ಬಳಿಕ ಮಂಗಳೂರಿನ…

Read More

ಕೌಲಾಲಂಪುರ, ಸೆ. 23: ಮಲೇಷ್ಯಾಕ್ಕೆ ಪ್ರವಾಸದ ಉದ್ದೇಶದಿಂದ ತೆರಳುವ ಭಾರತೀಯರು ಅಲ್ಲಿಗೆ ಹೋಗಿ ಉದ್ಯೋಗ ಹುಡುಕುವುದು ಅಥವಾ ಕೆಲಸ ಮಾಡುವುದು ಕಾನೂನುಬಾಹಿರವಾಗಿದ್ದು, ಇಂತಹ ಪ್ರಕರಣಗಳಲ್ಲಿ ಬಂಧನ, ವಶಕ್ಕೆ ಪಡೆಯುವುದು ಹಾಗೂ ದಂಡ ಸೇರಿದಂತೆ ಕಠಿಣ ಕಾನೂನು ಕ್ರಮ ಎದುರಾಗಬಹುದು ಎಂದು ಕೌಲಾಲಂಪುರದಲ್ಲಿರುವ ಭಾರತೀಯ ಹೈಕಮಿಷನ್ ಎಚ್ಚರಿಕೆ ನೀಡಿದೆ. ಮಲೇಷ್ಯಾ ವಲಸೆ ಇಲಾಖೆಯ ನಿಯಮಗಳ ಪ್ರಕಾರ, ಭಾರತೀಯ ನಾಗರಿಕರಿಗೆ ಪ್ರವಾಸೋದ್ಯಮ ಉದ್ದೇಶಕ್ಕಾಗಿ 2026ರ ಡಿಸೆಂಬರ್ 31ರವರೆಗೆ ವೀಸಾ ವಿನಾಯಿತಿ ಇದೆ. ಆದರೆ…

Read More

✍️ವಿಶೇಷ ಬರಹ : ಡಾ। ವಾಣಿಶ್ರೀ ಐತಾಳ್ ರೋಗ ಬಂದ ಮೇಲೆ ಔಷಧ ಹುಡುಕುವುದಕ್ಕಿಂತ, ರೋಗ ಬಾರದಂತೆ ಬದುಕುವುದನ್ನು ಕಲಿಸುವುದೇ ಆಯುರ್ವೇದದ ಶಕ್ತಿ” ಇಂದಿನ ವೇಗದ ಜಗತ್ತಿನಲ್ಲಿ ಆರೋಗ್ಯವೇ ದೊಡ್ಡ ಸವಾಲಾಗುತ್ತಿದೆ. ಈ ಸವಾಲಿಗೆ ಸಾವಿರಾರು ವರ್ಷಗಳ ಹಿಂದೆಯೇ ಉತ್ತರ ನೀಡಿದ ಭಾರತೀಯ ಜ್ಞಾನ ಪರಂಪರೆ — ಆಯುರ್ವೇದ. ಇಂದು ಮನುಷ್ಯನ ಜೀವನ ಹಿಂದೆಂದಿಗಿಂತಲೂ ವೇಗವಾಗಿದೆ. ಬೆಳಗ್ಗಿನಿಂದ ರಾತ್ರಿ ತನಕ ಕೆಲಸದ ಒತ್ತಡ, ಮೊಬೈಲ್ ಮತ್ತು ಪರದೆಗಳ ಬಳಕೆ, ಅನಿಯಮಿತ…

Read More

ಬೆಂಗಳೂರು: LPG ಗ್ರಾಹಕರಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಿದ್ದಿದ್ದು, ಅಕ್ಟೋಬರ್ 1ರಿಂದ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯವಾಗಲಿದೆ ಎಂದು ತಿಳಿಸಲಾಗಿದೆ. LPG ಸಂಪರ್ಕ ಹೊಂದಿರುವ ಗ್ರಾಹಕರು ನಿಗದಿತ ಸಮಯದೊಳಗೆ ಬಯೋಮೆಟ್ರಿಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ.ಬಯೋಮೆಟ್ರಿಕ್ ದೃಢೀಕರಣ ಮಾಡಿಸದ ಗ್ರಾಹಕರಿಗೆ ಸಬ್ಸಿಡಿ ಸಿಲಿಂಡರ್ ಪಡೆಯುವಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ LPG ಗ್ರಾಹಕರು ತಮ್ಮ ಗ್ಯಾಸ್ ಏಜೆನ್ಸಿ ಅಥವಾ ಸಂಬಂಧಿತ ವಿತರಣಾ ಕೇಂದ್ರವನ್ನು ಸಂಪರ್ಕಿಸಿ ಅಗತ್ಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳುವಂತೆ ಸೂಚಿಸಲಾಗಿದೆ.ಅಕ್ಟೋಬರ್ 1ರಿಂದ ನಿಯಮ…

Read More

ಕುಂದಾಪುರ: 15 ಲಕ್ಷ ರೂಪಾಯಿ ಸಾಲ ನೀಡುವ ಭರವಸೆ ನೀಡಿ 7 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ ಪರಿಣಾಮ, ಯುವಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ನ್ಯಾಯಾಲಯಕ್ಕೆ ಸಲ್ಲಿಸಲಾದ ಖಾಸಗಿ ದೂರಿನ ಆಧಾರದ ಮೇಲೆ ಬೀಜಾಡಿ ಗ್ರಾಮದ ಸತೀಶ ಕಾಂಚನ್‌ ಎಂಬಾತನ ವಿರುದ್ಧ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾಮದ ಮೀರಾ ಕೃಷ್ಣಮೂರ್ತಿ ಎಂಬುವರ ಮಗ ವಿನಯಕುಮಾರ್ ವಂಚನೆಗೊಳಗಾಗಿ…

Read More