ನಿಮಗೆ ದಿನನಿತ್ಯ ಮುಂಜಾನೆ ಎದ್ದ ನಂತರ ಕಾಫಿ, ಟೀ ಕುಡಿಯುವ ಅಭ್ಯಾಸವಿದ್ರೆ ನೀವು ಖಂಡಿತ ಈ ಅಂಕಣ ಓದಲೇಬೇಕು. ಕಾಫಿ ಅಥವಾ ಟೀ ಕುಡಿಯದೇ ಇರಲು ಸಾಧ್ಯವಿಲ್ಲ ಎನ್ನುವ ಅನೇಕ ಮಂದಿ ನಮ್ಮ ನಡುವೆ ಇದ್ದಾರೆ. ಲೆಮನ್ ಟೀ, ಗ್ರೀನ್ ಟೀ ಕುಡಿಯುವ ಅಭ್ಯಾಸವನ್ನು ಕೂಡ ಆರೋಗ್ಯದ ದೃಷ್ಟಿಯಿಂದ ಕೆಲವರು ರೂಢಿ ಮಾಡಿಕೊಂಡಿರುತ್ತಾರೆ.
ಕಾಫಿ ಅಥವಾ ಟೀ ಕುಡಿಯುವಾಗ ಅದಕ್ಕೆ ಹಾಲು ಹಾಗೂ ಸಕ್ಕರೆ ಬೆರೆಸುವ ಅಭ್ಯಾಸ ನಮ್ಮದು, ಆದ್ರೆ ಸಕ್ಕರೆ ಮಾನವನ ದೇಹಕ್ಕೆ ಒಳ್ಳೆಯದಲ್ಲ, ಇನ್ನೂ ಹಾಲು ಕೂಡ ಇತಮಿತವಾಗಿ ಬಳಸಿದ್ರೆ ಮಾತ್ರ ಒಳ್ಳೇದು ಎಂದು ಅನೇಕ ಸಂಶೋಧನೆಗಳು ಹೇಳಿದೆ.
ಕಪ್ಪು ಕಾಫಿ ಕುಡಿಯುವ ಅಭ್ಯಾಸ ನಿಮಗಿದ್ದರೆ ಅದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಟಪ್ಸ್ ವಿಶ್ವವಿದ್ಯಾಲಯದ ಸಂಶೋಧನೆ ಪ್ರಕಾರ ಕಪ್ಪು ಕಾಫಿ (black tea) ಹೃದಯ ಸಂಬಂಧ ಕಾಯಿಲೆ ನಿವಾರಸಲು ಸಹಾಯವಾಗುತ್ತೆ ಎನ್ನಲಾಗಿದೆ.
ಸಕ್ಕರೆ ಹಾಗೂ ಕೇಫಿನ್ ಪುಡಿ ಬಳಸಿ ಮಾಡುವ ಕಾಫಿ ಸೇವನೆ ಮಾಡುವವರಿಗೆ ಹೋಲಿಸಿದರೆ ಬ್ಲಾಕ್ ಟೀ ಕುಡಿಯುವವರ ಜೀವಿತಾವಧಿ ಹೆಚ್ಚು ಎನ್ನಲಾಗಿದೆ. ಹೃದಯದ ರಕ್ತನಾಳ ಸಮಸ್ಯೆಗೂ ಕೂಡ ಬ್ಲಾಕ್ ಟೀ ರಾಮಬಾಣವಾಗಿ ಕೆಲಸ ಮಾಡುತ್ತದೆ. ಸಕ್ಕರೆ ಸೇರಿಸದ ಕಪ್ಪು ಕಾಫಿ ರೋಗ ನಿರೋಧಕ ಅಂಶಗಳಿಂದ ಕೂಡಿರುತ್ತದೆ. ಕಾಫಿಯಲ್ಲಿರುವ ಕೇಫೇನ್ ಅಂಶ ನರಮಂಡಲವನ್ನ ಉತ್ತೇಜಗೊಳಿಸುತ್ತದೆ. ಹಾಗೇ ದೈಹಿಕ ಕಾರ್ಯ ಶಮತೆಯನ್ನ ವೃದ್ಧಿಗೊಳಿಸುತ್ತದೆ. ಬೆಳಗ್ಗೆ ಎದ್ದ ಕೂಡಲೇ ಕಪ್ಪು ಕಾಫಿ ಸೇವನೆ ಮಾಡುವುದರಿಂದ ದೇಹವು ಉಲ್ಲಾಸ ಭರಿತವಾಗಿರುತ್ತದೆ.
ಕಪ್ಪು ಕಾಫಿಯು ಕ್ಯಾಲೋರಿ ಮುಕ್ತವಾಗಿದ್ದು ನಿಮ್ಮ ಜೀರ್ಣಕ್ರಿಯೆಗೆ ಇದು ತುಂಬಾನೇ ಸಹಕಾರಿಯಾಗಿದೆ. ಇನ್ನೂ ತೂಕ ಇಳಿಸಲು ಬ್ಲಾಕ್ ಟೀ ಸಾಕಷ್ಟು ಪರಿಣಾಮಕಾರಿಯಾಗಿದೆ.
ಬ್ಲಾಕ್ ಟೀ ಸೇವನೆಯಿಂದ ಇನ್ಸೂಲಿನ್ ಸಂವೇದನೇ ಹಾಗೂ ಗ್ಲುಕೋಸ್ ಚಯಾಪಚಯ ಕ್ರಿಯೆಯನ್ನ ಹೆಚ್ಚಿಸುತ್ತದೆ. ಈ ಕಾರಣದಿಂದ ಮಧುಮೇಹ ಮುಕ್ತರಾಗುತ್ತೀರಿ. ಬ್ಲಾಕ್ ಟೀ ಹೃದಯದ ಉರಿಯುತವನ್ನ ನಿವಾರಿಸುತ್ತದೆ. ಕೆಲ ಸಂಶೋಧನೆ ಪ್ರಕಾರ ಬ್ಲಾಕ್ ಟೀ ರಕ್ತದೊತ್ತಡ ಕಡಿಮೆ ಮಾಡಿ ಪಾಶ್ವವಾಯು ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ಒಟ್ಟಾರೆ ಬ್ಲಾಕ್ ಕಾಫಿ ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆ ದೂರವಾಗುತ್ತದೆ ಎನ್ನುವುದು ಅಧ್ಯಯನ ಮೂಲಕ ಸಾಬೀತಾಗಿದೆ.

