ಬೆಂಗಳೂರು: ಎಲ್ಲಾ ಪೋಷಕರಿಗೂ ತಮ್ಮ ಮಕ್ಕಳನ್ನು ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಓದಿಸಬೇಕು ಎಂಬ ಕನಸಿರುತ್ತದೆ. ಆದರೆ, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಲಕ್ಷಾಂತರ ರೂಪಾಯಿ ಡೊನೇಷನ್ ಕಟ್ಟಲು ಸಾಧ್ಯವಾಗಲ್ಲ.
ಶಿಕ್ಷಣ ಇಲಾಖೆಯು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ವರದಾನವಾಗಿರುವ ‘ಶಿಕ್ಷಣ ಹಕ್ಕು ಕಾಯ್ದೆ’ (RTE – Right to Education) ಅಡಿಯ 2026-27ನೇ ಸಾಲಿನ ಪ್ರವೇಶಾತಿ ಪ್ರಕ್ರಿಯೆಗೆ ಚಾಲನೆ ನೀಡಿದೆ.
ನೆರೆಹೊರೆ ಶಾಲೆಗಳ ಪಟ್ಟಿ ಸಿದ್ಧಪಡಿಸುವ ಕಾರ್ಯ ವಿಳಂಬವಾದ ಹಿನ್ನೆಲೆಯಲ್ಲಿ, ಇದೀಗ ಖಾಸಗಿ ಅನುದಾನರಹಿತ ಶಾಲೆಗಳಲ್ಲಿನ ಶೇ. 25ರಷ್ಟು ಮೀಸಲಾತಿ ಸೀಟುಗಳ ಪ್ರವೇಶಾತಿಗಾಗಿ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
RTE ಪ್ರವೇಶಾತಿಯ ಪರಿಷ್ಕೃತ ವೇಳಾಪಟ್ಟಿ (2026-27)
💥ಅರ್ಹ ಶಾಲೆಗಳ ಮತ್ತು ಲಭ್ಯವಿರುವ ಸೀಟುಗಳ ಪಟ್ಟಿ ಪ್ರಕಟಣೆ 10.03.2026
💥ಪೋಷಕರಿಗೆ ಅರ್ಜಿ ಸಲ್ಲಿಸಲು ಪ್ರಾಯೋಗಿಕ ಅವಧಿ 11.03.26- 12.03.26
💥ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭ 16.03.2026-15.04.2026
💥ಸಲ್ಲಿಕೆಯಾದ ಅರ್ಜಿಗಳ ಪರಿಶೀಲನೆ (E-ID ಮೂಲಕ)
17.03.2026 – 16.04.2026
💥ಲಾಟರಿ ಪ್ರಕ್ರಿಯೆಗೆ ಅರ್ಹರಾದ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಣೆ- 21.04.2026
💥ಮೊದಲ ಸುತ್ತಿನ ಆನ್ಲೈನ್ ಲಾಟರಿ ಮೂಲಕ ಸೀಟು ಹಂಚಿಕೆ : 27.04.26
💥ಶಾಲೆಗಳಲ್ಲಿ ಮೊದಲ ಸುತ್ತಿನ ದಾಖಲಾತಿ ಪ್ರಕ್ರಿಯೆ
29.04.26 – 15.05.26
💥ಎರಡನೇ ಸುತ್ತಿನ ಲಾಟರಿ ಮೂಲಕ ಸೀಟು ಹಂಚಿಕೆ :
19.05.2026
💥ಎರಡನೇ ಸುತ್ತಿನ ದಾಖಲಾತಿ ಪ್ರಕ್ರಿಯೆ : 20.05.26 – 30.05.26
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು
ಮಾರ್ಚ್ 16 ರಿಂದ ಅರ್ಜಿ ಸಲ್ಲಿಕೆ ಆರಂಭವಾಗುವುದರಿಂದ, ಪೋಷಕರು ಈ ಕೆಳಗಿನ ದಾಖಲೆಗಳನ್ನು ಮುಂಚಿತವಾಗಿಯೇ ಸಿದ್ಧಪಡಿಸಿ ಇಟ್ಟುಕೊಳ್ಳಬೇಕು.
ಮಗುವಿನ ಜನನ ಪ್ರಮಾಣ ಪತ್ರ- ವಯಸ್ಸಿನ ದೃಢೀಕರಣಕ್ಕಾಗಿ ಕಡ್ಡಾಯ. ಮಗುವಿನ ಆಧಾರ್ ಕಾರ್ಡ್ ಮತ್ತು ತಂದೆ-ತಾಯಿ ಇಬ್ಬರ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ: EWS ಮತ್ತು ಮೀಸಲಾತಿ ಕೋರುವವರು ಕಡ್ಡಾಯವಾಗಿ RD ಸಂಖ್ಯೆ ಹೊಂದಿರುವ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ನೀಡಬೇಕು (ವಾರ್ಷಿಕ ಆದಾಯ ಸಾಮಾನ್ಯವಾಗಿ ₹3.5 ಲಕ್ಷದ ಒಳಗಿರಬೇಕು). ರೇಷನ್ ಕಾರ್ಡ್, ವೋಟರ್ ಐಡಿ ಅಥವಾ ಆಧಾರ್ ಕಾರ್ಡ್. ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ.
ವಿಶೇಷ ವರ್ಗ: ಅನಾಥ ಮಕ್ಕಳು, ಎಚ್ಐವಿ ಬಾಧಿತರು ಅಥವಾ ವಿಶೇಷ ಚೇತನ ಮಕ್ಕಳಾಗಿದ್ದಲ್ಲಿ ಸಂಬಂಧಪಟ್ಟ ಪ್ರಮಾಣ ಪತ್ರ.
ಗಮನಿಸಲೇಬೇಕಾದ ಪ್ರಮುಖ ನಿಯಮಗಳು
ವಯೋಮಿತಿ ಕಡ್ಡಾಯ: LKG ಪ್ರವೇಶಕ್ಕೆ: ಮಗುವಿಗೆ 3 ವರ್ಷ 10 ತಿಂಗಳು ತುಂಬಿರಬೇಕು.
1ನೇ ತರಗತಿ ಪ್ರವೇಶಕ್ಕೆ: ಮಗುವಿಗೆ 5 ವರ್ಷ 10 ತಿಂಗಳು ತುಂಬಿರಬೇಕು.
ನೆರೆಹೊರೆ ಶಾಲೆ : ನಿಮ್ಮ ವಾಸಸ್ಥಳದ ವ್ಯಾಪ್ತಿಯಲ್ಲಿರುವ (ವಾರ್ಡ್ ಅಥವಾ ಪಂಚಾಯತ್ ವ್ಯಾಪ್ತಿ) ಶಾಲೆಗಳನ್ನು ಮಾತ್ರ ಆಯ್ಕೆ ಮಾಡಲು ನಿಮಗೆ ಅವಕಾಶವಿರುತ್ತದೆ. ದೂರದ ಶಾಲೆಗಳನ್ನು ಆಯ್ಕೆ ಮಾಡುವಂತಿಲ್ಲ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ : ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ಮಾರ್ಚ್ 16 ರಿಂದ ನೀವು ನೇರವಾಗಿ ಅರ್ಜಿ ಸಲ್ಲಿಸಬಹುದು.
ಪೋರ್ಟಲ್ ವೀಕ್ಷಿಸಲು RTE ಅಧಿಕೃತ ವೆಬ್ಸೈಟ್ ಕ್ಲಿಕ್ ಮಾಡಿ
ಅರ್ಹ ಶಾಲೆಗಳ ಪಟ್ಟಿ ವೀಕ್ಷಿಸಲು ಹಾಗೂ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಶಿಕ್ಷಣ ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡಿ. VISIT RTE PORTAL
ಪೋಷಕರಿಗೆ ಸಲಹೆ :
“ಅರ್ಜಿ ಸಲ್ಲಿಕೆ ಆರಂಭವಾಗಲು ಇನ್ನೂ ಕಾಲಾವಕಾಶವಿದೆ. ನಿಮ್ಮ ಮಗುವಿನ ಆಧಾರ್ ಕಾರ್ಡ್ನಲ್ಲಿರುವ ಹೆಸರು, ಹುಟ್ಟಿದ ದಿನಾಂಕ ಮತ್ತು ಜನನ ಪ್ರಮಾಣಪತ್ರದಲ್ಲಿರುವ ವಿವರಗಳು ಒಂದೇ ರೀತಿ ಇವೆಯೇ ಎಂಬುದನ್ನು ಚೆಕ್ ಮಾಡಿಕೊಳ್ಳಿ. ಹಾಗೆಯೇ, ಆದಾಯ ಪ್ರಮಾಣ ಪತ್ರದ ಅವಧಿ ಮುಗಿದಿದ್ದರೆ, ತಕ್ಷಣವೇ ‘ನಾಡಕಚೇರಿ’ ಅಥವಾ ‘ಕರ್ನಾಟಕ ಒನ್’ ಕೇಂದ್ರಕ್ಕೆ ತೆರಳಿ ಹೊಸ ಪ್ರಮಾಣ ಪತ್ರಕ್ಕೆ (RD Number) ಅರ್ಜಿ ಹಾಕಿ.
ಆರ್ಥಿಕವಾಗಿ ಹಿಂದುಳಿದ ವರ್ಗದಡಿ (EWS) ಉಚಿತ ಸೀಟು ಪಡೆಯಲು ಪೋಷಕರ ವಾರ್ಷಿಕ ಆದಾಯವು ₹3.5 ಲಕ್ಷಕ್ಕಿಂತ ಕಡಿಮೆ ಇರಬೇಕು.
ಇಲ್ಲ. RTE ಕಾಯ್ದೆಯಡಿ ಕೇವಲ ಪ್ರವೇಶಾತಿ ಹಂತದಲ್ಲಿ (ಅಂದರೆ LKG ಅಥವಾ 1ನೇ ತರಗತಿ) ಮಾತ್ರ ಉಚಿತ ಸೀಟಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

