ಮಂಗಳೂರು: ಹೂಡಿಕೆ ಮಾಡಿ ಹೆಚ್ಚಿನ ಲಾಭಗಳಿಸಬಹುದು ಎಂದು ಆಮಿಷವೊಡ್ಡಿ ಮಹಿಳೆಯೊಬ್ಬರಿಗೆ 19.06 ಲಕ್ಷ ರೂ. ವಂಚನೆಗೈದಿರುವ ಕುರಿತು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಬೈಲ್ನಲ್ಲಿ ಗೂಗಲ್ ಮೂಲಕ ಸಾಫ್ಟೋನಿಕ್ ವೆಬ್ಸೈಟ್ ಹುಡುಕಾಡಿ ಎಪಿಕೆ ಫೈಲ್ ಡೌಗ್ಲೋಡ್ ಮಾಡಿದ್ದೆ ಬಳಿಕ ಸಾಫ್ಟೋನಿಕ್ ಆ್ಯಪ್ ಬಳಸಿ ಬ್ಯಾಂಕ್ ಖಾತೆಯ ವಿವರ ನೀಡಿದ್ದೆ.
ಹೆಚ್ಚಿನ ಲಾಭದ ಉದ್ದೇಶದಿಂದ ಈ ಆ್ಯಪ್ನಲ್ಲಿರುವ ನಾನಾ ಕಂಪನಿಗಳಿಗೆ ಒಟ್ಟು 19,06,166 ಲಕ್ಷ ರೂ. ಹೂಡಿಕೆ ಮಾಡಿದ್ದೆ. ಜನವರಿಯಲ್ಲಿ 1 ಲಕ್ಷ ರೂ.ವಾಪಸ್ ಪಡೆದುಕೊಂಡಿದ್ದು, ನಂತರ ತನ್ನನ್ನು ಬ್ಲಾಕ್ ಮಾಡಿದ್ದರು ಎಂದು ವಂಚನೆಗೊಳಗಾದ ಮಹಿಳೆ ಉರ್ವ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

