ಮಂಗಳೂರು: ನಗರದ ಕುದ್ರೋಳಿ ಮಂಡಿ ಬಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಯುವತಿಯೋರ್ವಳು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ
ನಾಪತ್ತೆಯಾದ ಯುವತಿ ಐಶ್ವರ್ಯ ಮಲ್ಲಪ್ಪ ಕಾತ್ರಿಕೆ (19) ಎಂದು ತಿಳಿದು ಬಂದಿದೆ.
ಫೆ.20ರಂದು ಮನೆಯಿಂದ ಹೊರಗೆ ಹೋದವರು ಮರಳಿ ಬಾರದೆ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

