ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಹೆಜ್ಜೆ ಇಡಲಾಗಿದೆ. ಕ್ಷೇತ್ರದ 18 ಪ್ರಮುಖ ಪಿಡಬ್ಲ್ಯೂಡಿ ರಸ್ತೆಗಳ ದುರಸ್ತಿ ಹಾಗೂ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ CRIF (Central Road and Infrastructure Fund) ನಿಧಿಯಿಂದ ಒಟ್ಟು ₹119 ಕೋಟಿ ಅನುದಾನ ಮಂಜೂರಾಗಿದೆ.
ಈ ಅನುದಾನದಿಂದ ವಿವಿಧ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳಲಾಗುತ್ತಿದ್ದು, ಅವುಗಳ ವಿವರ ಹೀಗಿದೆ:
ಬಾಳೆಹೊನ್ನೂರು-ಶೃಂಗೇರಿ ರಸ್ತೆ – ₹50 ಕೋಟಿ
ಕೊಪ್ಪ-ಜಯಪುರ-ಶೃಂಗೇರಿ ರಸ್ತೆ – ₹6 ಕೋಟಿ
ಕುಂದಾಪುರ-ಬೈಂದೂರು-ವಿರಾಜಪೇಟೆ ರಸ್ತೆ – ₹6 ಕೋಟಿ
ಉಡುಪಿ-ಹಿರಿಯಡ್ಕ-ಕಾರ್ಕಳ-ಸುಬ್ರಹ್ಮಣ್ಯ ರಸ್ತೆ – ₹6 ಕೋಟಿ
ಬ್ರಹ್ಮಾವರ-ಜನ್ನಾಡಿ ರಸ್ತೆ – ₹5 ಕೋಟಿ
ಬಾರ್ಕೂರು ರಸ್ತೆ – ₹10 ಕೋಟಿ
ಶಿರೂರು-ಕೊಕ್ಕರ್ಣೆ-ಸಂತೆಕಟ್ಟೆ ರಸ್ತೆ – ₹3 ಕೋಟಿ
ಹಳೆ ಎಂ.ಬಿ.ಸಿ ರಸ್ತೆ – ₹1.60 ಕೋಟಿ
ಆರೂರು-ಮಣ್ಣಿನಜಡ್ಡು-ಕೊಕ್ಕರ್ಣೆ ರಸ್ತೆ – ₹1.40 ಕೋಟಿ
ತೀರ್ಥಹಳ್ಳಿ-ಕುಂದಾಪುರ ರಸ್ತೆ – ₹2 ಕೋಟಿ
ಹೆಬ್ರಿ ತಾಲೂಕಿನ ಮುನಿಯಾಲು-ಕಬ್ಬಿನಾಲೆ ರಸ್ತೆ – ₹1 ಕೋಟಿ
ಅತ್ರಾಡಿ-ಮಂಗಳೂರು (ಕಾರ್ಕಳ ತಾಲೂಕು) ರಸ್ತೆ – ₹1 ಕೋಟಿ
ಕುಂಟಾಡಿ-ಹಳೆಕಟ್ಟೆ-ಕೆಮ್ಮಣ್ಣು MDR ರಸ್ತೆ – ₹1 ಕೋಟಿ
ನಾರಾವಿ-ಮಂಗಳೂರು (ಕಾರ್ಕಳ ತಾಲೂಕು) ರಸ್ತೆ – ₹1 ಕೋಟಿ
ಕಡೂರು ತಾಲೂಕಿನ ಬೇಗೂರು ಗೇಟ್-ಅರೇಹಳ್ಳಿ ಮೂಲಕ ಮಚ್ಚೇರಿ ರಸ್ತೆ – ₹6 ಕೋಟಿ
ಚಿಕ್ಕಮಗಳೂರು ತಾಲೂಕಿನ ಸೀತಾಲಯ್ಯನ ಗಿರಿ-ಮುಳ್ಳಯ್ಯನಗಿರಿ ರಸ್ತೆ – ₹6 ಕೋಟಿ
ಮೂಡಿಗೆರೆ ತಾಲೂಕಿನ ರಾಜ್ಯ ಹೆದ್ದಾರಿ 106 (ಬಾಳೂರು ಹ್ಯಾಂಡ್ ಪೋಸ್ಟ್-ಕಳಸ ರಸ್ತೆ) – ₹6 ಕೋಟಿ
ತರೀಕೆರೆ ತಾಲೂಕಿನ ರಾಜ್ಯ ಹೆದ್ದಾರಿ 57 ರಸ್ತೆ ಅಭಿವೃದ್ಧಿ – ₹6 ಕೋಟಿ
ಈ ಎಲ್ಲಾ ಕಾಮಗಾರಿಗಳಿಗೆ ಈಗಾಗಲೇ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಶೀಘ್ರದಲ್ಲೇ ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾಗಲಿವೆ. ಕ್ಷೇತ್ರದ ಜನತೆಗೆ ಉತ್ತಮ ಹಾಗೂ ಸುಸಜ್ಜಿತ ರಸ್ತೆ ಸೌಲಭ್ಯ ಒದಗಿಸುವುದು ಮುಖ್ಯ ಉದ್ದೇಶವಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಸಹಕಾರ ನೀಡುತ್ತಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೃತಜ್ಞತೆ ಸಲ್ಲಿಸಿದ್ದಾರೆ.

